ನವದೆಹಲಿ, ಜು 04 (DaijiworldNews/PY): ದೇಶಭಕ್ತ ಲಡಾಖಿಗಳು ಚೀನಾದ ಒಳನುಸುಳುವಿಕೆಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಅವರ ಎಚ್ಚರಿಕೆಯನ್ನು ನಿರ್ಲಕ್ಷಿಸುವುದರಿಂದ ಭಾರತಕ್ಕೆ ಬಹಳ ನಷ್ಟವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಮಾಧ್ಯಮದ ವರದಿಯೊಂದನ್ನು ಟ್ವೀಟ್ನಲ್ಲಿ ಹಂಚಿಕೊಂಡಿದ್ದು, ಇದು ಕೆಲವು ಲಡಾಖಿಯರನ್ನು ತೋರಿಸುತ್ತಿದೆ, ಚೀನಿಯರು ಲಡಾಖ್ನಲ್ಲಿ ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೇಶಭಕ್ತ ಲಡಾಖಿಗಳು ಚೀನಾದ ಒಳನುಗ್ಗುವಿಕೆಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಅವರು ಎಚ್ಚರಿಕೆ ನೀಡುತ್ತಿದ್ದಾರೆ. ಅವರ ಎಚ್ಚರಿಕೆಯನ್ನು ನಿರ್ಲಕ್ಷಿಸುವುದರಿಂದ ಭಾರತಕ್ಕೆ ಬಹಳ ನಷ್ಟವಾಗುತ್ತದೆ. ಭಾರತದ ಸಲುವಾಗಿ, ದಯವಿಟ್ಟು ಅವರ ಮಾತುಗಳನ್ನು ಕೇಳಿ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಲಡಾಖ್ನಲ್ಲಿ ಚೀನಾದ ಸೈನ್ಯವು ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂದು ಆರೋಪಿಸಿ ರಾಹುಲ್ ಗಾಂಧಿ ಕೆಲವು ಲಡಾಖಿಗಳ ಧ್ವನಿಗಳನ್ನು ವೀಡಿಯೊದಲ್ಲಿ ಹಂಚಿಕೊಂಡಿದ್ದಾರೆ.