ನವದೆಹಲಿ, ಜು. 04 (DaijiworldNews/MB) : ವಿಶ್ವ ದರ್ಜೆಯ ಭಾರತೀಯ ಆಪ್ಗಳ ರಚನೆಗೆ ಟೆಕ್ಕಿಗಳು ಮತ್ತು ಸ್ಟಾರ್ಟ್ ಅಪ್ ಕಮ್ಯೂನಿಟಿಗೆ ಅನುಕೂಲವಾಗುವಂತೆ ನರೇಂದ್ರ ಮೋದಿ ಶನಿವಾರ ಆತ್ಮನಿರ್ಭರ್ ಭಾರತ್ ಆಪ್ ಇನ್ನೋವೇಶನ್ ಚಾಲೆಂಜ್ ಅನ್ನು ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಇಂದು ವಿಶ್ವ ದರ್ಜೆಯ ಮೇಡ್ ಇನ್ ಇಂಡಿಯಾ ಅಪ್ಲಿಕೇಶನ್ಗಳನ್ನು ರಚಿಸಲು ಟೆಕ್ಕಿಗಳು ಮತ್ತು ಸ್ಟಾರ್ಟ್ ಅಪ್ ಕಮ್ಯೂನಿಟಿಗೆ ಅಪಾರ ಉತ್ಸಾಹವಿದೆ. ಅವರ ಆಲೋಚನೆಗಳು ಮತ್ತು ಉತ್ಪನ್ನಗಳನ್ನು ಸುಗಮಗೊಳಿಸಲು ಭಾರತ ಸರ್ಕಾರದ ತಾಂತ್ರಿಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹಾಗೂ ಅಟಲ್ ಇನ್ನೋವೇಶನ್ ಮಿಷನ್ ಆತ್ಮನಿರ್ಭರ್ ಭಾರತ್ ಆಪ್ ಇನ್ನೋವೇಶನ್ ಚಾಲೆಂಜ್ ಅನ್ನು ಪ್ರಾರಂಭಿಸುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಲಿಂಕ್ಡ್ಇನ್ನಲ್ಲಿ ಪೋಸ್ಟ್ ಮಾಡಿರುವ ಅವರು, ಮೇಡ್ ಇನ್ ಇಂಡಿಯಾ ಆಪ್ ನಂತಹ ಮಾಡುವ ಉತ್ಪನ್ನವನ್ನು ಹೊಂದಿದ್ದರೆ ಅಥವಾ ಅಂತಹ ಉತ್ಪನ್ನಗಳನ್ನು ರಚಿಸಲು ನಿಮಗೆ ದೃಷ್ಟಿಕೋನ ಹಾಗೂ ಪರಿಣತಿ ಇದ್ದರೆ ಈ ಆತ್ಮನಿರ್ಭರ್ ಭಾರತ್ ಆಪ್ ಇನ್ನೋವೇಶನ್ ಚಾಲೆಂಜ್ ನಿಮಗಾಗಿ ಆಗಿದೆ. ಎಲ್ಲಾ ನನ್ನ ಟೆಕ್ಕಿ ಸ್ನೇಹಿತರು ಭಾಗವಹಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಚೀನಾದ ೫೯ ಆಪ್ಗಳನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದ್ದು ಮೇಡ್ ಇನ್ ಇಂಡಿಯಾ ಆಪ್ಗಳ ರಚನೆಗೆ ಈ ಆತ್ಮನಿರ್ಭರ್ ಭಾರತ್ ಆಪ್ ಇನ್ನೋವೇಶನ್ ಚಾಲೆಂಜ್ ಅನ್ನು ಆರಂಭಿಸಲಾಗಿದೆ.