ಶ್ರೀನಗರ, ಜು 05 (DaijiworldNews/PY): ಜಮ್ಮು-ಕಾಶ್ಮೀರದ ಪುಲ್ವಾಮಾದ ಗಂಗೂ ಪ್ರದೇಶದಲ್ಲಿ ಭಾನುವಾರ ನಡೆದ ಐಇಡಿ ಸ್ಫೋಟದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಓರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ.
ಸುಧಾರಿತ ಸ್ಪೋಟಕ ಸಾಧಕವನ್ನು ಬಳಸಿ ಭಯೋತ್ಪಾದಕರು ಸ್ಫೋಟ ನಡೆಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಇದು ಕಳೆದ ನಾಲ್ಕು ದಿನಗಳಲ್ಲಿ ಸಿಆರ್ಪಿಎಫ್ ಮೇಲೆ ನಡೆದ ಎರಡನೇ ದಾಳಿಯಾಗಿದ್ದು, ಸೊಪೋರ್ನಲ್ಲಿ ಸಿಆರ್ಪಿಎಫ್ ಜವಾನ್ ಮತ್ತು ನಾಗರಿಕನನ್ನು ಬುಧವಾರ ಹತ್ಯೆಗೈದಿದ್ದರು.