ಗಂಗಾವತಿ, ಜು. 05 (DaijiworldNews/MB) : ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೊರೊನಾ ಸೋಂಕಿತ ಮಹಿಳೆ ಮನೆಯಿಂದ ಎರಡು ಕಿ.ಮೀ ದೂರ ನಡೆದುಕೊಂಡು ಬಂದು ಆಸ್ಪತ್ರೆಗೆ ದಾಖಲಾದ ಘಟನೆ ಗಂಗಾವತಿ ನಗರದ ಮುರಾರಿ ಕ್ಯಾಂಪ್ನಲ್ಲಿ ನಡೆದಿದ್ದು ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸಾಂದರ್ಭಿಕ ಚಿತ್ರ
ಯಾವುದೇ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಸೋಂಕಿತ ವ್ಯಕ್ತಿಯನ್ನು ಆಂಬುಲೆನ್ಸ್ನಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಬೇಕು. ಹಲವು ಭಾರೀ ಕೊರೊನಾ ಸೋಂಕಿತರು ಸೋಂಕು ದೃಢಪಟ್ಟ ಬಳಿಕ ಮನೆಯಲ್ಲಿಯೇ ಅಧಿಕ ಗಂಟೆಗಳ ಕಾಲ ಕಾದು ಕೂರಬೇಕಾದ ಪ್ರಸಂಗ ಉಂಟಾಗಿದೆ. ಆದರೆ ಇದೀಗ ಗಂಗಾವತಿಯಲ್ಲಿ 33 ವರ್ಷದ ಮಹಿಳೆಗೆ ಕೊರೊನಾ ಸೋಂಕು ಪಾಸಿಟಿವ್ ಆದ ಬಳಿಕ ನೀವೆ ಬಂದು ಆಸ್ಪತ್ರೆಗೆ ದಾಖಲಾಗಿ ಎಂದು ಸರಕಾರಿ ಆಸ್ಪತ್ರೆಯ ಅಧಿಕಾರಿಗಳು ಪತಿಗೆ ಕರೆ ಮಾಡಿ ತಿಳಿಸಿದ್ದು ಮಹಿಳೆ ಬೇರೆ ವಾಹನದಲ್ಲಿ ಹೋದಲ್ಲಿ ಬೇರೆಯವರಿಗೆ ಸೋಂಕು ಹರಡುವ ಸಾಧ್ಯತೆ ಇದೆ ಎಂದು ನಡೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿ ತಿಳಿಸಿದೆ.
ಇನ್ನು ಅಧಿಕಾರಿಗಳು ನಾವು ಆ್ಯಂಬುಲೆನ್ಸ್ ಮನೆ ಹತ್ತಿರ ಬಂದಲ್ಲಿ ಗಲಾಟೆಯಾಗ ಬಹುದು. ಆದ್ದರಿಂ ನೀವೇ ಬಂದು ಆಸ್ಪತ್ರೆಗೆ ದಾಖಲಾಗಿ ಎಂದು ಮಹಿಳೆಯ ಪತಿಗೆ ಹೇಳಿದ್ದಾರೆ ಎನ್ನಲಾಗಿದೆ.