ಗುವಾಹಟಿ, ಜು 05 (DaijiworldNews/PY): ರಾಜಭವನ ಕ್ಯಾಂಪಸ್ನಲ್ಲಿ ವ್ಯಕ್ತಿಯೋರ್ವನಿಗೆ ಕೊರೊನಾ ಸೋಂಕು ದೃಢಪಟ್ಟ ಕೂಡಲೇ ರಾಜಭವನ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಕಾಮರೂಪ್ ಮಹಾನಗರ ಜಿಲ್ಲಾಧಿಕಾರಿ ಬಿಸ್ವಾಜಿತ್ ಪೆಗು ಅವರು ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ರಾಜಭವನ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಕಾಮರೂಪ್ ಮಹಾನಗರ ಜಿಲ್ಲಾಧಿಕಾರಿ ಬಿಸ್ವಾಜಿತ್ ಪೆಗು ಅವರು ಘೋಷಣೆ ಮಾಡಿದ ಅವರು, ಆ ಪ್ರದೇಶವನ್ನು ತಕ್ಷಣವೇ ಸೀಲ್ಡೌನ್ ಮಾಡುವಂತೆ ಗುವಾಹಟಿ ಕಂದಾಯ ವೃತ್ತದ ವೃತ್ತ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕಂಟೈನ್ಮೆಂಟ್ ವಲಯವು, ಉತ್ತರದಲ್ಲಿ ಹೋಟೆಲ್ ಬೆಲ್ಲೆ ವ್ಯೂ, ದಕ್ಷಿಣದ ಬೊಂಕೋವರ್ ನಗರ, ಪೂರ್ವದ ಬೋರ್ತಕೂರ್ ಕ್ಲಿನಿಕ್ ಮತ್ತು ಪಶ್ಚಿಮದಲ್ಲಿ ಎಂಜಿ ರಸ್ತೆಯವರೆಗೆ ಇರುತ್ತದೆ ಎಂದು ಹೇಳಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಅಸ್ಸಾಂನಲ್ಲಿ ಒಟ್ಟು 9,673 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 3,310 ಸಕ್ರಿಯ ಪ್ರಕರಣಗಳಿವೆ. 6,349 ಮಂದಿ ಗುಣಮುಖರಾಗಿದ್ದು, ಜುಲೈ 4 ರವರೆಗೆ 14 ಸಾವುಗಳು ಸಂಭವಿಸಿವೆ ಎಂದು ತಿಳಿಸಿದೆ.