ಬೆಂಗಳೂರು, ಜು. 05 (DaijiworldNews/MB) : ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಮಾಡುವುದಿಲ್ಲ ಜನರು ಆತಂಕಕ್ಕೆ ಒಳಗಾಗಿ ಬೆಂಗಳೂರಿನಿಂದ ಊರಿಗೆ ವಾಪಾಸ್ ಹೋಗಬೇಡಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜನತೆಗೆ ಮನವಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೊರೊನಾ ಪರಿಸ್ಥಿತಿ ರಾಜ್ಯದಲ್ಲಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಜನರು ಭಯ ಪಡಬೇಡಿ. ಬೆಂಗಳೂರು ಬಿಟ್ಟು ಬೇರೆ ಕಡೆ ತೆರಳಿದರೆ ನಿಮ್ಮ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಆತಂಕ ಅಧಿಕವಾಗುತ್ತದೆ. ಹಾಗಾಗಿ ಬೆಂಗಳೂರಿನಲ್ಲೇ ಸುರಕ್ಷಿತವಾಗಿ ಇರಿ ಎಂದು ಹೇಳಿದ್ದಾರೆ.
ನಾಲ್ಕು ವಾರಗಳಲ್ಲಿ ಪ್ರತಿ ಭಾನುವಾರ ಮಾಡಲಾಗುವ ಲಾಕ್ಡೌನ್ ಇಂದು ಯಶಸ್ವಿಯಾಗಿದೆ. ಜನರೇ ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದಾರೆ. ಜನರು ಅನಗತ್ಯವಾಗಿ ಹೊರಗಡೆ ತಿರುಗಾಡಿಲ್ಲ. ಸಂಜೆಯವರೆಗೂ ಎಲ್ಲರೂ ಕಟ್ಟುನಿಟ್ಟಾಗಿ ಲಾಕ್ಡೌನ್ ನಿಯಮ ಪಾಲಿಸಿ ಎಂದು ವಿನಂತಿಸಿದರು.