ಕುಲ್ಗಾಮ್, ಜು. 06 (DaijiworldNews/MB) : ಶನಿವಾರ ಜಮ್ಮು-ಕಾಶ್ಮೀರದ ಕಲ್ಗಾಮ್ ಜಿಲ್ಲೆಯ ಅರ್ರಾ ಪ್ರದೇಶದಲ್ಲಿ ಎನ್ಕೌಂಟರ್ನಿಂದ ಸಾವನ್ನಪ್ಪಿದ್ದ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಶನಿವಾರ ಈ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಿಂದ ಇಬ್ಬರು ಉಗ್ರರು ಸಾವನ್ನಪ್ಪಿದ್ದು ಒಬ್ಬರು ಯೋಧರಿಗೆ ಗಾಯವಾಗಿತ್ತು. ಬಳಿಕ ವೈದ್ಯಕೀಯ ಶಿಷ್ಟಾಚಾರದಂತೆ ಇಬ್ಬರು ಉಗ್ರರ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ ಇಬ್ಬರಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಈ ಇಬ್ಬರ ಪೈಕಿ ಓರ್ವ ವಿದೇಶಿ ಪ್ರಜೆಯಾಗಿದ್ದು, ಅಲಿ ಬಾಯ್ ಆಲಿಯಾಸ್ ಹೈದರ್ ಎಂದು ಗುರುತಿಸಲಾಗಿದೆ. ಆದರೆ ಮತ್ತೊಬ್ಬ ಉಗ್ರನನ್ನು ಗುರುತಿಸಲಾಗಿಲ್ಲ.
ಇನ್ನು ಈ ಇಬ್ಬರ ಕೊರೊನಾ ಮಾರ್ಗಸೂಚಿಯಂತೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.