ನವದೆಹಲಿ, ಜು. 06 (DaijiworldNews/MB) : ವಂದೇ ಭಾರತ್ ಮಿಷನ್ ಅಡಿಯಲ್ಲಿ ಜುಲೈ 11 ರಿಂದ ಜುಲೈ 19 ರವರೆಗೆ ಏರ್ ಇಂಡಿಯಾದ 36 ವಿಮಾನಗಳನ್ನು ಭಾರತಕ್ಕೆ ಯುಎಸ್ನಿಂದ ಭಾರತೀಯರನ್ನು ಕರೆತರಲಿದೆ.
ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ವಿಮಾನಯಾನ ಸಂಸ್ಥೆ, ಜುಲೈ 6 ರಂದು ಏರ್ ಇಂಡಿಯಾ ವೆಬ್ಸೈಟ್ ಮೂಲಕ ಟಿಕೆಟ್ಗಳನ್ನು ಕಾಯ್ದಿರಿಸಬಹುದು ಎಂದು ತಿಳಿಸಿದೆ.
ಜೂನ್ನಲ್ಲಿ ಯುಎಸ್ ಸಾರಿಗೆ ಇಲಾಖೆಯು ನವದೆಹಲಿ "ತಾರತಮ್ಯ ಮತ್ತು ನಿರ್ಬಂಧಿತ ಅಭ್ಯಾಸಗಳಲ್ಲಿ" ತೊಡಗಿದೆ ಎಂದು ಆರೋಪಿಸಿ ಭಾರತದಿಂದ ಚಾರ್ಟರ್ ಹಾರಾಟವನ್ನು ನಿರ್ಬಂಧಿಸುವುದಾಗಿ ಹೇಳಿತ್ತು.
ವಂದೇ ಭಾರತ್ ಮಿಷನ್ ಅಡಿಯಲ್ಲಿ ಏರ್ ಇಂಡಿಯಾ ನಡೆಸುತ್ತಿರುವ ಕಾರ್ಯದಲ್ಲಿ ತಮ್ಮ ವಿಮಾನಗಳಿಗೂ ಅವಕಾಶ ನೀಡುವಂತೆ ಯುಎಸ್, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ಹಲವಾರು ದೇಶಗಳಿಂದ ಮನವಿಗಳು ಬಂದಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದ್ದು ಈ ಬಗ್ಗೆ ಸಚಿವಾಲಯವು ಪರಿಶೀಲಿಸುತ್ತಿದೆ ಎಂದು ವರದಿ ತಿಳಿಸಿದೆ.
ಕೊರೊನಾ ಸಾಂಕ್ರಾಮಿಕದಿಂದ ವಿದೇಶದಲ್ಲಿ ಸಿಲುಕಿರುವವರನ್ನು ಭಾರತಕ್ಕೆ ವಾಪಾಸ್ ಕರೆತರುವ ವಂದೇ ಭಾರತ್ ಮಿಷನ್ನ ನಾಲ್ಕನೇ ಹಂತ ಜುಲೈ 3 ರಂದು ಪ್ರಾರಂಭವಾಯಿತು.