ನವದೆಹಲಿ, ಜು. 06 (DaijiworldNews/MB) : ಭಾರತ ಹಾಗೂ ಚೀನಾ ಸೇನೆಗಳ ನಡುವೆ ಘರ್ಷಣೆ ನಡೆದು ೨೦ ಯೋಧರು ಮಡಿಯಲು ಕಾರಣವಾಗಿದ್ದ ಗಲ್ವಾನ್ನ ವಿವಾದಿತ ಭೂ ಪ್ರದೇಶದಿಂದ ಸಂಘರ್ಷ ಆರಂಭವಾದ ಇಷ್ಟು ದಿನಗಳಲ್ಲಿ ಮೊದಲ ಬಾರಿಗೆ ಚೀನಾ ಸೇನೆಯೂ ವಿವಾದಿತ ಭೂ ಪ್ರದೇಶದಿಂದ ಕಾಲ್ಕಿತ್ತಿದ್ದು ಸುಮಾರು 1-2 ಕಿ.ಮೀ ಹಿಂದೆ ಸರಿದಿದೆ.
ಗಲ್ವಾನ್ ಸಂಘರ್ಷವಾದ ಬಳಿಕ ಉಭಯ ರಾಷ್ಟ್ರಗಳ ಸೇನಾಧಿಕಾರಿಗಳ ನಡುವೆ ಮಾತುಕತೆ ಫಲದಾಯಕವಾಗಿದ್ದು ಚೀನಾ ಸೇನೆ ಹಾಗೂ ಭಾರತೀಯ ಸೇನೆ ವಿವಾದಿತ ಪ್ರದೇಶದಿಂದ ಹಿಂದೆಕ್ಕೆ ಸರಿಯುವುದಾಗಿ ಒಪ್ಪಿಕೊಂಡಿತ್ತು. ಈಗ ಚೀನಾ ಸೇನೆಯು 2 ಕಿ.ಮೀ ಹಿಂದಕ್ಕೆ ಸರಿಯುವುದು ಮಾತ್ರವಲ್ಲದೇ ವಿವಾದಿತ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ತನ್ನ ಟೆಂಟ್ಗಳನ್ನೂ ಕೂಡಾ ಸ್ಥಳಾಂತರ ಮಾಡಿದೆ ಎಂದು ವರದಿ ತಿಳಿಸಿದೆ.
ಚೀನಾ ಭಾರತದ ನಡುವೆ ನಡೆದ ಘರ್ಷಣೆಯಿಂದ ಭಾರತದ 20 ಯೋಧರು ಹುತಾತ್ಮರಾದ ಬಳಿಕ ಎರಡು ದೇಶಗಳ ನಡುವೆ ವಿಷಮ ಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದು ಭಾರತ ಚೀನಾ 59 ಆಪ್ಗಳನ್ನು ನಿಷೇಧ ಮಾಡಿದ್ದು ಮಾತ್ರವಲ್ಲದೇ ಕೆಲವು ವಸ್ತುಗಳ ಆಮದಿಗೂ ನಿಷೇಧ ಹೇರಿದೆ. ಹಾಗೆಯೇ ಬಳಿಕ ಆತ್ಮ ನಿರ್ಭರ್ ಭಾರತ್ ಅಡಿಯಲ್ಲಿ ವಿಶ್ವ ದರ್ಜೆಯ ಭಾರತೀಯ ಆಪ್ಗಳ ರಚನೆಗೆ ಟೆಕ್ಕಿಗಳು ಮತ್ತು ಸ್ಟಾರ್ಟ್ ಅಪ್ ಕಮ್ಯೂನಿಟಿಗೆ ಆತ್ಮನಿರ್ಭರ್ ಭಾರತ್ ಆಪ್ ಇನ್ನೋವೇಶನ್ ಚಾಲೆಂಜ್ ಅನ್ನು ಪ್ರಧಾನಿ ಮೋದಿಯವರು ನೀಡಿದ್ದಾರೆ.