ನವದೆಹಲಿ, ಜು 06 (Daijiworld News/MSP): ಬೆಂಗಳೂರು ಮೂಲದ ವಿಜ್ಞಾನಿಗಳ ಸಂಸ್ಥೆಯಾದ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ (ಐಎಎಸ್ಸಿ) ಆಗಸ್ಟ್ 15 ರೊಳಗೆ ಕರೋನವೈರಸ್ ಲಸಿಕೆಯನ್ನು ಬಿಡುಗಡೆ ಮಾಡುವ ಭಾರತೀಯ ಸಂಶೋಧನಾ ಗುರಿಯನ್ನು "ಅಸಾಧ್ಯ" ಮತ್ತು "ಅವಾಸ್ತವಿಕ" ಎಂದು ಕರೆದಿದೆ. ಈ ಬಗ್ಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ 2021ಕ್ಕಿಂತ ಮೊದಲು ಯಾವುದೇ ಕೊರೊನಾಕ್ಕೆ ಸಂಬಂಧಿಸಿದ ಯವುದೇ ಲಸಿಕೆ ಬಿಡುಗಡೆಯಾಗುವುದಿಲ್ಲ ಎಂದು ಸ್ಪಷ್ಟಪಡಿದೆ.
"ಎಲ್ಲಾ ಕ್ಲಿನಿಕಲ್ ಪ್ರಯೋಗಗಳು ಪೂರ್ಣಗೊಂಡ ನಂತರ 2020 ಆಗಸ್ಟ್ 15 ರೊಳಗೆ ಸಾರ್ವಜನಿಕ ಆರೋಗ್ಯ ಬಳಕೆಗಾಗಿ ಲಸಿಕೆಯನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ" ಎಂದು ಐಸಿಎಂ ಆರ್ ಹೇಳಿಕೆ ನೀಡಿತ್ತು.
ಖಾಸಗಿ ಔಷಧೀಯ ಕಂಪನಿಯಾದ ಐಸಿಎಂಆರ್ ಮತ್ತು ಭಾರತ್ ಬಯೋಟೆಕ್ ಇಂಡಿಯಾ ಲಿಮಿಟೆಡ್ ಜಂಟಿಯಾಗಿ ಕರೋನವೈರಸ್ - ಎಸ್ಎಆರ್ಎಸ್-ಕೋವ್ -2 ಎಂಬ COVAXIN ಲಸಿಕೆಯನ್ನು ಅಭಿವೃದ್ದಿಪಡಿಸುತ್ತಿದೆ.
ಭಾರತದಲ್ಲಿ ಸಿದ್ದಗೊಳ್ಳುತ್ತಿರುವ ಕೊವಾಕ್ಸಿನ್ ಮತ್ತು ಝೈಕೋವ್ -ಡಿ ಎಂಬ ಎರಡು ಲಸಿಕೆಗಳು , ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡು ಮಾನವ ಮೇಲೆ ಪ್ರಯೋಗದ ದೃಷ್ಟಿಯಲ್ಲಿ ಬಳಕೆ ಮಾಡಲಾಗುತ್ತಿದೆ , ಇದರ ಸಾಧಕ ಬಾಧಕ ವರದಿ ಬಳಿಕವೇ ಈ ಲಸಿಕೆಗೆ ಅನುಮತಿ ಸಿಗಲಿದೆ ಹೀಗಾಗಿ ೨೦೨೧ರ ವರೆಗೆ ಯಾವುದೇ ಲಸಿಕೆ ಭಾರತದಲ್ಲಿ ಬಿಡುಗಡೆ ಆಗುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.