ಶ್ರೀನಗರ, ಜು 07 (DaijiworldNews/PY): ಪುಲ್ವಾಮದ ಗೂಸು ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಭಾರತೀಯ ಸೇನಾಪಡೆ ನಡೆಸಿದ ಎನ್ಕೌಂಟರ್ಗೆ ಓರ್ವ ಭಯೋತ್ಪಾದಕ ಸಾವನ್ನಪ್ಪಿದ್ದಾನೆ.
ಮಂಗಳವಾರ ಬೆಳಗ್ಗೆ ನಡೆದಿರುವ ಎನ್ಕೌಂಟರ್ಗೆ ಒಬ್ಬ ಭಯೋತ್ಪಾದಕ ಮೃತಪಟ್ಟಿದ್ದಾನೆ ಕಾರ್ಯಾಚರಣೆ ಮುಂದುವರೆದಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.
ಭಯೋತ್ಪಾದಕರ ಗುಂಪೊಂದು ಮನೆಯಲ್ಲಿ ಅಡಗಿಕೊಂಡಿರುವ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದು, ಈ ಸಂದರ್ಭ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.
ಮಾಹಿತಿ ಮೇರೆಗೆ ಭದ್ರತಾಪಡೆಗಳು ಪ್ರದೇಶವನ್ನು ಸುತ್ತುವರೆದಿದ್ದು ಎನ್ಕೌಂಟರ್ ನಡೆಸಿದ್ದಾರೆ. ಪರಿಣಾಮ ಉಗ್ರನೊಬ್ಬ ಸಾವನ್ನಪ್ಪಿದ್ದಾನೆ. ಇನ್ನಷ್ಟು ಉಗ್ರರು ಅಡಗಿದ್ದಾರೆ ಎನ್ನು ಶಂಕೆ ಮೂಡಿದ್ದು, ಕಾರ್ಯಚರಣೆ ಮುಂದುವರೆದಿದೆ.