ಜೈಪುರ, ಜು 07 (DaijiworldNews/PY): ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ಪತಿಯನ್ನು ಪತ್ನಿಯೇ ಹತ್ಯೆಗೈದ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ದೀನಘರ್ ಪ್ರದೇಶದಲ್ಲಿ ನಡೆದಿದೆ.
ಹತ್ಯೆಯಾದ ವ್ಯಕ್ತಿಯನ್ನು ಮನರಾಮ್ (35), ಆರೋಪಿಯನ್ನು ಪಪ್ಪು ದೇವಿ (30) ಎನ್ನಲಾಗಿದೆ.
ಜೂನ್ 15ರಂದು ಪಪ್ಪು ದೇವಿ ಪತಿ ಮನರಾಮ್ ಮನೆಯಲ್ಲಿ ಮಲಗಿದ್ದರು. ಆ ವೇಳೆ ಪಪ್ಪು ದೇವಿ ನನ್ನ ಮೊಬೈಲ್ಗೆ ಕರೆ ಮಾಡಿ ಮನರಾಮ್ ಮಾತನಾಡುತ್ತಿಲ್ಲ. ತಕ್ಷಣವೇ ಮನೆಗೆ ಬನ್ನಿ ಎಂದಿದ್ದರು. ಈ ಕಾರಣದಿಂದ ನಾವೆಲ್ಲರೂ ಅಣ್ಣನ ಮನೆಗೆ ಹೋದೆವು. ಮನೆಗೆ ಹೋಗಿ ನೋಡಿದಾಗ ಮನರಾಮ್ನ ಕಾಲಿನಲ್ಲಿ ರಕ್ತ ಬರುತ್ತಿತ್ತು ಎಂದು ಸಹೋದರ ತೋಗರಾಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.
ಪತಿಯ ಸಾವಿನ ಬಗ್ಗೆ ಕಥೆ ಕಟ್ಟಿದ ಪಪ್ಪು ದೇವಿ, ಅವರ ಮನೆಯವರೊಂದಿಗೆ ಮನರಾಮ್ಗೆ ವಿದ್ಯುತ್ ಶಾಕ್ ಹೊಡೆದಿದೆ. ಹಾಗಾಗಿ ಆತನ ಕಾಲಿನಲ್ಲಿ ರಕ್ತಬರುತ್ತಿದೆ ಎಂದು ಹೇಳಿದ್ದಾಳೆ. ಇದನ್ನು ಸತ್ಯವೆಂದು ತಿಳಿದ ಮನರಾಮ್ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪತಿ ಮೃತಪಟ್ಟ ದಿನಗಳ ನಂತರ ಕುಟುಂಬಸ್ಥರು ಪಪ್ಪು ದೇವಿಯನ್ನು ಪುನಃ ಪ್ರಶ್ನೆ ಮಾಡಿದ್ದು, ಆಗ ಆಕೆ ಸತ್ಯವನ್ನು ಹೇಳಿದ್ದಾಳೆ. ಅಲ್ಲದೇ, ತನಗೆ ಹನುಮನ್ರಾಮ್ ಎನ್ನುವಾತನೊಂದಿಗೆ ಅಕ್ರಮ ಸಂಬಂಧವಿತ್ತು ಎಂದು ಹೇಳಿದ್ದಾಳೆ.
ಹನುಮನ್ರಾಮ್ ಎನ್ನುವಾತನೊಂದಿಗೆ ಅಕ್ರಮ ಸಂಬಂಧ ಇದ್ದ ಕಾರಣ ಈಕೆ ಪತಿಯನ್ನು ಹತ್ಯೆಗೈಯಲು ಉಪಾಯ ಮಾಡಿದ್ದಾಳೆ. ಇದರೊಂದಿಗೆ ಪತಿಯನ್ನು ಹತ್ಯೆ ಮಾಡಲು ಪ್ರಿಯಕರನ ನೆರವೂ ಪಡೆದುಕೊಂಡಿದ್ದು ಆತ ಹತ್ಯೆ ಮಾಡಲು ಅನುಮತಿ ನೀಡಿದ ಸಂದರ್ಭ ಇಬ್ಬರೂ ಸೇರಿ ಮನರಾಮ್ ಅವರನ್ನು ಹತ್ಯೆ ಮಾಡಿದ್ದಾರೆ.
ಹತ್ಯೆ ಮಾಡಲು ಪಪ್ಪು ದೇವಿ ಮನರಾಮ್ಗೆ ನಿದ್ರೆ ಮಾತ್ರೆ ನೀಡಿದ್ದು, ಬಳಿಕ ಆತ ನಿದ್ರಿಸಿ ಬಳಿಕ ಆಕೆ ಆತನ ಕಾಲು ಬೆರಳುಗಳಿಗೆ ವಿದ್ಯುತ್ ಶಾಕ್ ನೀಡಿದ್ದಾಳೆ. ಘಟನೆಯ ಬಗ್ಗೆ ಇಬ್ಬರು ಆರೋಪಿಗಳು ಸತ್ಯ ಒಪ್ಪಿಕೊಂಡಿದ್ದಾರೆ.
ಪತಿಯನ್ನು ಹತ್ಯೆ ಮಾಡಲು ಪತ್ನಿ ಬೇರೆಯವನೊಂದಿಗೆ ಅಕ್ರಮ ಸಂಬಂಧವಿದ್ದ ಬಗ್ಗೆ ಗೊತ್ತಾಗಿರಿವುದೇ ಕಾರಣ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಘಟನೆಯ ಸಂಬಂಧ ಮೃತನ ಸಹೋದರ, ಅತ್ತಿಗೆ ಹಾಗೂ ಹನುಮನ್ರಾಮ್ ವಿರುದ್ದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.