ಮುಂಬೈ, ಜು 07 (DaijiworldNews/PY): ಕೊರೊನಾ ಪಾಸಿಟವ್ ವರದಿ ಬಂದ ಕಾರಣ ಏಮ್ಸ್ ನ ನಾಲ್ಕನೇ ಮಹಡಿಯಿಂದ ಹಾರಿ ಸಾವನ್ನಪ್ಪಿದ ಪತ್ರಕರ್ತ ತರುಣ್ ಸಿಸೋಡಿಯಾ (37) ಅವರು ಪತ್ರಕರ್ತರ ವಾಟ್ಸಾಪ್ ಗ್ರೂಪ್ನಲ್ಲಿ ಕಳುಹಿಸಿದ್ದ ಸಂದೇಶವನ್ನು ಸಂಶಯಕ್ಕೆ ಕಾರಣವಾಗಿದೆ.
ತರುಣ್ ಸಿಸೋಡಿಯಾ ಅವರು ಸಿಸೋಡಿಯಾ ಈಶಾನ್ಯ ದೆಹಲಿಯ ಭಜನ್ಪುರದ ನಿವಾಸಿಯಾಗಿದ್ದು, ಹಿಂದಿ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಜುಲೈ 6 ರ ಸೋಮವಾರ ಮಧ್ಯಾಹ್ನ, 37 ವರ್ಷದ ಪತ್ರಕರ್ತ ತರುಣ್ ಸಿಸೋಡಿಯಾ ದೆಹಲಿಯ ಏಮ್ಸ್ ನ ಕೊರೊನಾ ವಾರ್ಡ್ನ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಅವರನ್ನು ತೀವ್ರ ನಿಗಾ ಘಟಕಕ್ಕೆ ಕರೆದೊಯ್ಯಲಾಯಿತು. ಆದರೆ, ಅವರು ತೀವ್ರವಾದ ಗಾಯಗಳಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ತರುಣ್ ಸಿಸೋಡಿಯಾ ಅವರು ಸಾಯುವ ಮೊದಲು, ದೆಹಲಿ ಮೂಲದ ಪತ್ರಕರ್ತರ ವಾಟ್ಸಾಪ್ ಗುಂಪಿನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ, ನಾನು ಕೊಲೆಯಾಗಬಹುದು ಎಂದು ಬರೆದಿರುವ ಸಂದೇಶ ಈಗ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಅವರ ಚಿಕಿತ್ಸೆಯ ಸಮಯದಲ್ಲಿ ಆಸ್ಪತ್ರೆಯ ನಿರ್ಲಕ್ಷ್ಯವನ್ನು ಅವರು ತಿಳಿಸಲೆತ್ನಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರ ದೂರುಗಳು ಆರೋಗ್ಯ ಸಚಿವಾಲಯಕ್ಕೂ ತಲುಪಿದ್ದು, ತರುಣ್ ಸಾವಿನ ಬಗ್ಗೆ ಅಧಿಕೃತ ವಿಚಾರಣೆಯನ್ನು ತಕ್ಷಣ ರೂಪಿಸುವಂತೆ ಆರೋಗ್ಯ ಸಚಿವ ಹರ್ಷ್ ವರ್ಧನ್ ಏಮ್ಸ್ ನಿರ್ದೇಶಕರಿಗೆ ಆದೇಶಿಸಿದ್ದಾರೆ.
ತರುಣ್ ಸಿಸೋಡಿಯಾ ಸಾವಿನ ಬಗ್ಗೆ ಅವರ ಗೆಳೆಯ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿದ್ದಾರೆ.