ಬೆಂಗಳೂರು, ಜು 07 (DaijiworldNews/PY): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳ ಸಮನ್ವಯದ ಕೊರತೆಯಿಂದ ಜನ ರಸ್ತೆಯಲ್ಲೇ ಪರದಾಡುವಂತಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಕೋವಿಡ್ ನಿಯಂತ್ರಣದಲ್ಲಿ ದಿನಕ್ಕೊಂದು ಆದೇಶ, ಘಳಿಗೆಗೆ ಒಂದು ಸತ್ತೋಲೆ, ಕ್ಷಣಕ್ಕೊಂದು ನಿರ್ಧಾರ ತೆಗೆದುಕೊಂಡು ನಿರ್ವಹಣೆಯಲ್ಲಿ ವಿಫಲವಾಗಿದೆ. ಇಲಾಖೆಗಳ ಸಮನ್ವಯದ ಕೊರತೆಯಿಂದ ಜನ ರಸ್ತೆಯಲ್ಲೇ ಪರದಾಡುವಂತಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ವತಿಯಿಂದ, ಕೊರೊನಾ ಸಂಕಷ್ಟ ಮುಗಿಯುವ ತನಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ವಿಲೀನಗೊಳಿಸಿ ಒಂದೇ ವ್ಯವಸ್ಥೆಯ ನೇತೃತ್ವದಲ್ಲಿ ಆಡಳಿತ ನಡೆಸುವಂತೆ ಹೇಳುತ್ತೇನೆ ಎಂದು ತಿಳಿಸಿದ್ದಾರೆ.