ನವದೆಹಲಿ, ಜು 07 (DaijiworldNews/PY): ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಎಸ್ಎಸ್ಸಿ ಮಹಿಳಾ ಅಧಿಕಾರಿಗಳಿಗೆ ಪೂರ್ಣಾವಧಿ ಆಯೋಗ ನೀಡುವ ಕುರಿತು ತೀರ್ಪು ಅನುಷ್ಠಾನಗೊಳಿಸಲು ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರಕ್ಕೆ ಇನ್ನೂ ಒಂದು ತಿಂಗಳು ಕಾಲಾವಕಾಶ ನೀಡಿದೆ.
ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, ಕೇಂದ್ರವು ತನ್ನ ತೀರ್ಪಿನಲ್ಲಿ ನೀಡಿರುವ ಎಲ್ಲಾ ನಿರ್ದೇಶನಗಳನ್ನು ಪಾಲಿಸಬೇಕಾಗುತ್ತದೆ ಎಂದು ಹೇಳಿದರು. ಕೊರೊನಾ ಸೋಂಕನ್ನು ಉಲ್ಲೇಖಿಸಿ ತೀರ್ಪಿನ ಅನುಷ್ಠಾನಕ್ಕೆ ಆರು ತಿಂಗಳ ಕಾಲಾವಕಾಶ ಕೋರಿ ಕೇಂದ್ರವು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಉನ್ನತ ನ್ಯಾಯಾಲಯದ ನಿರ್ದೇಶನ ಬಂದಿದೆ.
ಫೆಬ್ರವರಿ 17 ರಂದು ನಡೆದ ಐತಿಹಾಸಿಕ ತೀರ್ಪಿನಲ್ಲಿ, ಸೈನ್ಯದ ಮಹಿಳಾ ಅಧಿಕಾರಿಗಳಿಗೆ ಪೂಣಾ ಆಯೋಗ ಮತ್ತು ಕಮಾಂಡ್ ಪೋಸ್ಟಿಂಗ್ಗಳನ್ನು ನೀಡಬೇಕೆಂದು ಉನ್ನತ ನ್ಯಾಯಾಲಯವು ನಿರ್ದೇಶಿಸಿತ್ತು. ಆದರೆ, ಕೇಂದ್ರ ಸರ್ಕಾರದ ನಿಲುವನ್ನು ಲಕ್ಷಿಸದೇ, ಅದು ಮಹಿಳೆಯರ ವಿರುದ್ಧ ಲಿಂಗ ತಾರತಮ್ಯ ಆಧರಿಸಿದೆ ಎಂದು ತಿರಸ್ಕರಿಸಿತು. .
ಮೂರು ತಿಂಗಳಲ್ಲಿ, ಸೇವೆ ಸಲ್ಲಿಸುತ್ತಿರುವ ಎಲ್ಲಾ ಎಸ್ಎಸ್ಸಿ ಮಹಿಳಾ ಅಧಿಕಾರಿಗಳನ್ನು 14 ವರ್ಷ ಅಥವಾ 20 ವರ್ಷಗಳ ಸೇವೆಯ ಹೊರತಾಗಿಯೂ ಶಾಶ್ವತ ಆಯೋಗಗಳಿಗೆ (ಪಿಸಿ) ಪರಿಗಣಿಸಬೇಕು ಎಂದು ಅದು ಕೇಂದ್ರಕ್ಕೆ ನಿರ್ದೇಶನ ನೀಡಿತ್ತು.