ನವದೆಹಲಿ, ಜು. 07 (DaijiworldNews/MB) : ಗಲ್ವಾನ್ ಕಣಿವೆಯಿಂದ ಭಾರತ ಹಾಗೂ ಚೀನಾ ತನ್ನ ಯೋಧರನ್ನು ವಾಪಾಸ್ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭ ಮಾಡಿದ್ದು ಏತನ್ಮಧ್ಯೆ ಕಾಂಗ್ರೆಸ್ನ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಸರ್ಕಾರದ ಮುಂದೆ ಮೂರು ಪ್ರಶ್ನೆಗಳನ್ನು ಇಟ್ಟಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಷ್ಟ್ರೀಯ ಹಿತಾಸಕ್ತಿ ಅತ್ಯುನ್ನತವಾಗಿದೆ. ಅದನ್ನು ರಕ್ಷಿಸುವುದು ಭಾರತ ಸರ್ಕಾರದ ಕರ್ತವ್ಯವೆಂದಾದರೆ ಸರ್ಕಾರ ಯಾಕಾಗಿ ಯಥಾಸ್ಥಿತಿ ಕಾಯ್ದುಕೊಳ್ಳಲು ಒತ್ತಾಯಿಸಲಿಲ್ಲ? ನಮ್ಮ ಭೂಪ್ರದೇಶದಲ್ಲಿ 20 ನಿರಾಯುಧ ಯೋಧರ ಹತ್ಯೆಯನ್ನು ಸಮರ್ಥಿಸಲು ಚೀನಾಕ್ಕೆ ಏಕೆ ಅವಕಾಶ ನೀಡಲಾಗಿದೆ? ಸರ್ಕಾರದ ಹೇಳಿಕೆಗಳಲ್ಲಿ ಯಾಕೆ ಗಲ್ವಾನ್ ಕಣಿವೆಯ ಪ್ರಾದೇಶಿಕ ಸಾರ್ವಭೌಮತ್ವ ಉಲ್ಲೇಖವಾಗಲಿಲ್ಲ?'' ಎಂದು ಪ್ರಶ್ನಿಸಿದ್ದಾರೆ.
ಇದರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ನಡೆದ ಮಾತುಕತೆಯ ಸಾರಾಂಶವನ್ನು ಪ್ರಕಟ ಮಾಡಿರುವ ಚೀನಾದ ವಿದೇಶಾಂಗ ಇಲಾಖೆ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ.