ಈ ಬಗ್ಗೆ ಫೇಸ್ಬುಕ್ನಲ್ಲಿ ತಿಳಿಸಿರುವ ಅವರು, ನನ್ನ ವಿಚಾರದಲ್ಲಿ ಒಂದು ಖಾಸಗಿ ಚಾನಲ್ ತಪ್ಪು ಮಾಹಿತಿ ನೀಡಿ ತೇಜೋವಧೆ ಮಾಡುವ ಪ್ರಯತ್ನ ಮಾಡಿರುವುದು ನನಗೆ ಬೇಸರವನ್ನುಂಟು ಮಾಡಿದೆ. ನಮ್ಮ ಸರ್ಕಾರ ಸದ್ಯಕ್ಕೆ ಶಾಲೆಗಳನ್ನು ಪ್ರಾರಂಭ ಮಾಡುವ ತೀರ್ಮಾನವನ್ನು ತೆಗೆದುಕೊಂಡಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತೇನೆ. ಆ ಯೋಚನೆಯೇ ಸರಕಾರದ ಮುಂದಿಲ್ಲ ಎನ್ನುವ ಬಗ್ಗೆ ಪದೇ ಪದೇ ಹೇಳಿದ್ದರು ಕೂಡಾ ಈ ಸುಳ್ಳು ಮಾಹಿತಿಯೇಕೆ? ಎಂದು ಕೇಳಿದ್ದಾರೆ.
ಅಲ್ಲದೇ, ಸರಕಾರವು ಆನ್-ಲೈನ್ ಕುರಿತೂ ಯಾವುದೇ ನಿರ್ಧಾರವನ್ನು ಘೋಷಣೆ ಮಾಡಿಲ್ಲ. ತಜ್ಞರ ಸಮಿತಿ ವರದಿ ಸರಕಾರದ ನಿರ್ಧಾರವಲ್ಲ. ಹೈಕೋರ್ಟ್ನಲ್ಲಿ ಆನ್-ಲೈನ್ ಕುರಿತು ವಿಚಾರಣೆ ಮುಗಿದಿದ್ದು, ತೀರ್ಪು ಇನ್ನು ಬರಬೇಕಿದೆ. ಈ ವಿಚಾರವಾಗಿ ಜನರಲ್ಲಿ ಗೊಂದಲವುಂಟುಮಾಡಬೇಡಿ. ನನ್ನ ಮೇಲೆ ಸಂಪೂರ್ಣ ಅಪಾರ್ಥ ಬರುವಂತೆ ಮಾಡಿರುವುದು, ನನಗೆ ಫೋನ್ ಕರೆಗಳ ಘೇರಾವ್ ಮಾಡಿ ಎಂದು ವೀಕ್ಷಕರಿಗೆ ಪ್ರಚೋದನೆ ಮಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಒಂದು ಖಾಸಗಿ ಟಿವಿ ಚಾನೆಲ್ ಇಂದು ರಾತ್ರಿ 9.00 ಗಂಟೆಗೆ ನನ್ನ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿ ತೇಜೋವಧೆ ಮಾಡುವ ಪ್ರಯತ್ನ ಮಾಡಿರುವುದು ನನಗೆ...
Posted by Suresh Kumar S on Tuesday, 7 July 2020