ವಿಶಾಖಪಟ್ಟಣ, ಜು 08 (DaijiworldNews/PY): ವಿಶಾಖಪಟ್ಟಣದಲ್ಲಿ ಅನಿಲ ಸೋರಿಕೆಯಾಗಿ 12 ಜನರು ಸಾವನ್ನಪ್ಪಿದ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಮಂಗಳವಾರ ರಾತ್ರಿ ಎಲ್ಜಿ ಪಾಲಿಮರ್ಸ್ನ ಸಿಇಒ ಮತ್ತು ಇಬ್ಬರು ನಿರ್ದೇಶಕರು ಸೇರಿದಂತೆ 10 ಜನರನ್ನು ಬಂಧಿಸಿದ್ದಾರೆ.
ಅನಿಲ ಸೋರಿಕೆ ತನಿಖೆಗಾಗಿ ರಾಜ್ಯ ಸರ್ಕಾರವು ನೇಮಿಸಿದ ಹೈ-ಪವರ್ ಕಮಿಟಿ ತನ್ನ ವರದಿಯನ್ನು ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರಿಗೆ ಸಲ್ಲಿಸಿದ ಒಂದು ದಿನದ ನಂತರ ಎಲ್ಜಿ ಪಾಲಿಮರ್ಸ್ನ ಸಿಇಒ ಮತ್ತು ಇಬ್ಬರು ನಿರ್ದೇಶಕರು ಸೇರಿದಂತೆ 10 ಜನರನ್ನು ಬಂಧಿಸಲಾಯಿತು.
ಎಲ್ಜಿ ಪಾಲಿಮರ್ಸ್ನಿಂದ ಅನೇಕ ಅಸಮರ್ಪಕತೆ ಮತ್ತು ಕಳಪೆ ಸುರಕ್ಷತಾ ಕ್ರಮಗಳಲು ಅನಿಲ ಸೋರಿಕೆಗೆ ಕಾರಣ ಎಂದು ಉನ್ನತಮಟ್ಟದ ತನಿಖಾ ವರದಿಯಲ್ಲಿ ಹೇಳಲಾಗಿದ ಎಂದು ವಿಶಾಖಪಟ್ಟಣಂ ನಗರ ಪೊಲೀಸ್ ಆಯುಕ್ತ ಆರ್ ಕೆ ಮೀನಾ ಅವರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಗೋಪಾಲಪಟ್ಟಣಂ ಪೊಲೀಸರು ಮೇ 7 ರಂದು ಎಲ್ಜಿ ಪಾಲಿಮರ್ಸ್ ವಿರುದ್ಧ ಪ್ರಕರಣ ದಾಖಲಿಸಿದ್ದರು.