ಚಂಡೀಗಢ, ಜು 08 (DaijiworldNews/PY): ಅಮ್ಮ ಮತ್ತು ಮಗ ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್ನ ಲುಧಿಯಾನದಲ್ಲಿ ನಡೆದಿದೆ.
ಮೃತಪಟ್ಟವರನ್ನು ಕೃಷ್ಣದೇವಿ (65), ಅವರ ಮಗ ಮನೀಶ್ ವರ್ಮಾ (35) ಎನ್ನಲಾಗಿದೆ. ದಾಬಾದಲ್ಲಿರುವ ಸದ್ಗುರ ನಗರದ ನಿವಾಸದಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆ ಮಾಲೀಕ ಮನೆಯ ಬಳಿ ಬಂದಾಗ ಯಾರೂ ಬಾಗಿಲೂ ತೆರೆಯಲಿಲ್ಲ ಎಂದು ಸಂಶಯಗೊಂಡ ಮಾಲೀಕ ಮನೆಯ ಕಿಟಕಿ ತೆರೆದು ನೋಡಿದ ಸಂದರ್ಭ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದ್ದು, ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ.
ಮೃತಪಟ್ಟ ಅಮ್ಮ ಹಾಗೂ ಮಗ ಎರಡು ವರ್ಷಗಳಿಂದ ಇದೇ ಮನೆಯಲ್ಲಿ ಬಾಡಿಗೆಗೆ ಇದ್ದರು. ಆತ್ಯಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಡೆತ್ನೋಟ್ ಸಿಕ್ಕಿಲ್ಲ. ಇತ್ತೀಚೆಗೆ ಮನೀಶ್ ಪತ್ನಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಆಕೆ ಅವಳ ತವರು ಮನೆಯಲ್ಲಿ ಮೃತಪಟ್ಟಿದ್ದಳು ಎಂದು ಪೊಲೀಸ್ ಅಧಿಕಾರಿ ಪವಿತರ್ ಸಿಂಗ್ ಹೇಳಿದ್ದಾರೆ.
ಘಟನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು, ಲಾಕ್ಡೌನ್ ಸಂದರ್ಭ ಕೆಲಸ ಕಳೆದುಕೊಂಡ ಮನೀಶ್ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ. ಅಲ್ಲದೇ, ಅನಾರೋಗ್ಯಕ್ಕೆ ತುತ್ತಾಗಿದ್ದ ಆತನ ಪತ್ನಿ ಕೂಡಾ ಮೃತಪಟ್ಟಿದ್ದು, ಆತ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದ್ದು, ಈ ಕಾರಣದಿಂದ ಆತ ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗಿದೆ.