ನವದೆಹಲಿ, ಜು. 08 (DaijiworldNews/MB) : ''ಆರ್ಥಿಕ ಸುನಾಮಿ ಬರಲಿದೆ ಎಂದು ನಾನು ತಿಂಗಳ ಹಿಂದೆ ಎಚ್ಚರಿಸಿದ್ದೆ'' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಸಣ್ಣ ಮತ್ತು ಮಧ್ಯಮ ಉದ್ಯಮಗಳು ನಾಶವಾಗುತ್ತಿವೆ. ದೊಡ್ಡ ಕಂಪನಿಗಳು ತೀವ್ರ ಒತ್ತಡದಲ್ಲಿವೆ. ಬ್ಯಾಂಕುಗಳು ಸಂಕಷ್ಟದಲ್ಲಿವೆ. ಆರ್ಥಿಕ ಸುನಾಮಿ ಬರಲಿದೆ ಎಂದು ನಾನು ತಿಂಗಳ ಹಿಂದೆ ಹೇಳಿದ್ದೆ. ಆದರೆ ನನ್ನ ಈ ಸತ್ಯದ ಎಚ್ಚರಿಕೆಗೆ ಬಿಜೆಪಿ ಮತ್ತು ಮಾಧ್ಯಮಗಳು ಅಪಹಾಸ್ಯ ಮಾಡಿದ್ದವು'' ಎಂದು ತಿಳಿಸಿದ್ದಾರೆ.
''ಭಾರತದ ಆರ್ಥಿಕ ನಿರ್ವಹಣೆ ಒಂದು ದುರಂತವಾಗಿದ್ದು ಅದು ಲಕ್ಷಾಂತರ ಕುಟುಂಬಗಳನ್ನು ನಾಶಪಡಿಸುತ್ತದೆ. ಅದನ್ನು ಇನ್ನು ಮುಂದೆ ಮೌನವಾಗಿ ಸ್ವೀಕರಿಸಲಾಗುವುದಿಲ್ಲ'' ಎಂದು ಮಂಗಳವಾರ ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.