ಲಖೌನೌ, ಜು. 09 (DaijiworldNews/MB) : ಕಳೆದ ವಾರ ಕಾನ್ಪುರದಲ್ಲಿ ನಡೆದ ಎನ್ಕೌಂಟರ್ ಸಂದರ್ಭದಲ್ಲಿ ೮ ಪೊಲೀಸರನ್ನು ರೌಡಿಶೀಟರ್ಗಳು ಹತ್ಯೆಗೈದ ಪ್ರಕರಣಕ್ಕೆ ಸಂಬಂದಿಸಿದಂತೆ ರೌಡಿಶೀಟರ್ಗಳಿಗೆ ದಾಳಿಯ ಮಾಹಿತಿ ನೀಡಿದ ಆರೋಪದಲ್ಲಿ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ.
ಬಂಧಿತರು ಚೌಬೆಪುರ ಸ್ಟೇಷನ್ ಆಫೀಸರ್ ವಿನಯ್ ತಿವಾರಿ ಮತ್ತು ಸಬ್ ಇನ್ಸ್ ಪೆಕ್ಟರ್ ಕೆ ಕೆ ಶರ್ಮಾ ರೌಡಿಶೀಟರ್ ವಿಕಾಸ್ ದುಬೆ ವಿರುದ್ಧ ಎನ್ಕೌಂಟರ್ ನಡೆದ ಸಂದರ್ಭದಲ್ಲಿ ಅಲ್ಲಿದ್ದು ಪೊಲೀಸರ ಮೇಲೆ ದಾಳಿಯಾದಾಗ ಅಲ್ಲಿಂದ ಓಡಿ ಹೋಗಿದ್ದರು ಎಂದು ಕಾನ್ಪುರ ಐಜಿ ಮೋಹಿತ್ ಅಗರ್ ವಾಲ್ ತಿಳಿಸಿದ್ದಾರೆ.
ಇನ್ನು ಪೊಲೀಸರು ದುಬೆ ಇದ್ದ ಸ್ಥಳಕ್ಕೆ ದಾಳಿ ನಡೆಸುವ ಬಗ್ಗೆ ಈ ಇಬ್ಬರು ಪೊಲೀಸರು ದುಬೆಗೆ ಮೊದಲೇ ಮಾಹಿತಿ ನೀಡಿದ್ದರು. ಹಾಗಾಗಿ ಅವರು ಎಲ್ಲಾ ತಯಾರಿ ಮಾಡಿಕೊಂಡು ಎಂಟು ಪೊಲೀಸರನ್ನು ಹತ್ಯೆ ಮಾಡಿದ್ದಾರೆ. ಈ ಇಬ್ಬರು ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿವೆ ಎಂದು ಕಾನ್ಪುರ ಎಸ್ ಎಸ್ ಪಿ ದಿನೇಶ್ ಕುಮಾರ್ ಪಿ ಹೇಳಿದ್ದಾರೆ.