ಶ್ರೀನಗರ, ಜು. 09 (DaijiworldNews/MB) : ಉತ್ತರ ಕಾಶ್ಮೀರದ ಬಂಡಿಪೋರ್ ಜಿಲ್ಲೆಯ ಬಿಜೆಪಿ ಜಿಲ್ಲಾ ಅಧ್ಯಕ್ಷ ಶೇಖ್ ವಾಸೀಂ ಬಾರಿ ಸೇರಿದಂತೆ ಅವರ ತಂದೆ ಹಾಗೂ ಸಹೋದರನನ್ನು ಶಂಕಿತ ಉಗ್ರರು ಬುಧವಾರ ಸಂಜೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಶೇಖ್ ವಾಸೀಂ ಬಾರಿ (38), ಅವರ ತಂದೆ ಬಶೀರ್ ಅಹ್ಮದ್ ಬಾರಿ (60) ಮತ್ತು ಸಹೋದರ ಉಮರ್ ಬಾರಿ (30) ಗುಂಡೇಟಿಗೆ ಬಲಿಯಾಗಿದ್ದಾರೆ.
ಶೇಖ್ ವಾಸೀಂ ಬಾರಿ ನಿವಾಸದ ಬಳಿ ಇದ್ದ ಅಂಗಡಿಯ ಸಮೀಪದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದು ಗುಂಡು ತಗುಲಿದವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಸ್ಥಳಕ್ಕೆ ಪೊಲೀಸರು ಹಾಗೂ ಸೇನಾ ಯೋಧರ ಆಗಮಿಸಿ ಉಗ್ರರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಅನಂತ್ನಾಗ್ ಜಿಲ್ಲೆಯ ಗ್ರಾಮವೊಂದರ ಪಂಚಾಯ್ತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನನ್ನು ಕಳೆದ ಜೂನ್ ತಿಂಗಳಲ್ಲಿ ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದರು.