ನವದೆಹಲಿ, ಜು. 09 (DaijiworldNews/MB) : ಕೇಂದ್ರ ಸರ್ಕಾರ ಚೀನಾದ ೫೯ ಆಪ್ಗಳನ್ನು ನಿಷೇಧ ಹೇರಿದ ಬೆನ್ನಲ್ಲೇ ಇದೀಗ ಫೇಸ್ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ 89 ಆ್ಯಪ್ಗಳನ್ನು ತೆಗೆದು ಹಾಕಲು ಯೋಧರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮಾಹಿತಿ ಸೋರಿಕೆ ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು ಜುಲೈ 15ರೊಳಗೆ 89 ಆಪ್ಗಳನ್ನು ಡಿಲೀಟ್ ಮಾಡುವಂತೆ ಆದೇಶ ನೀಡಲಾಗಿದೆ.
ಇನ್ಸ್ಟಾಗ್ರಾಮ್, ಸ್ನ್ಯಾಪ್ಚ್ಯಾಟ್, ಫೇಸ್ಬುಕ್ ರೀತಿಯ ಚೀನಾ ಮೂಲ ಹೊರತಾದ ಅಪ್ಲಿಕೇಷನ್ಗಳನ್ನೂ ಕೂಡಾ ಮಾಹಿತಿ ಸೋರಿಕೆ ಸಾಧ್ಯತೆಯ ಕಾರಣದಿಂದ ಯೋಧರಿಗೆ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು ಈ ಆದೇಶವನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ.
ಇನ್ನು ಪಾಕಿಸ್ತಾನ ಮತ್ತು ಚೀನಾವು ಆನ್ಲೈನ್ ಮೂಲಕ ಮಾಹಿತಿ ಕದಿಯುವ ಯತ್ನ ನಡೆದಿರುವ ಕಾರಣದಿಂದ ಈ ಆದೇಶವನ್ನು ನೀಡಲಾಗಿದೆ ಎಂದು ವರದಿ ತಿಳಿಸಿದೆ.
ಭಾರತ ಸರ್ಕಾರ ಈಗಾಗಲೇ ಟಿಕ್ಟಾಕ್, ಕ್ಯಾಮ್ಸ್ಕ್ಯಾನರ್, ಯುಸಿ ನ್ಯೂಸ್, ಶೇರ್ಇಟ್ ಸೇರಿದಂತೆ ಚೀನಾ ಮೂಲದ 59 ಆ್ಯಪ್ಗಳನ್ನು ದೇಶಾದಾದ್ಯಂತ ನಿಷೇಧಿಸಿದೆ.