ಬೆಂಗಳೂರು, ಜು 09 (DaijiworldNews/PY): ಜವಾಬ್ದಾರಿ ವಿರೋಧ ಪಕ್ಷವಾಗಿ ನಾವು ಜನರ ಪರ, ಸರ್ಕಾರದ ಪರ ಅಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಜನತೆಯ ಕಷ್ಟ-ನಷ್ಟಕ್ಕೆ ಕಾರಣವಾದ ಪ್ರಭುತ್ವದ ಜನವಿರೋಧಿ ನಡವಳಿಕೆಗಳಿಗೆ ಸಹಕರಿಸುವುದು ಜನದ್ರೋಹವಾಗುತ್ತದೆ. ಜವಾಬ್ದಾರಿ ವಿರೋಧ ಪಕ್ಷವಾಗಿ ನಾವು ಜನರ ಪರ, ಸರ್ಕಾರದ ಪರ ಅಲ್ಲ ಎಂದು ತಿಳಿಸಿದ್ದಾರೆ.
ಸಂಕಷ್ಟದ ಕಾಲದಲ್ಲಿ ಸಹಕಾರ. ವಿರೋಧಪಕ್ಷದ ಜವಾಬ್ದಾರಿ ಎಂಬ ಕಾರಣಕ್ಕೆ ಹೆಚ್ಚುಕಡಿಮೆ 3ತಿಂಗಳು ಸರ್ಕಾರದ ಅಕ್ರಮ- ವೈಫಲ್ಯಗಳನ್ನು ಬಹಿರಂಗವಾಗಿ ಪ್ರಶ್ನಿಸದೆ ಪತ್ರಗಳನ್ನಷ್ಟೇ ಬರೆದಿದ್ದೆ. ಸಿಎಂ ಅವರು ತಿದ್ದಿಕೊಳ್ಳದೆ ಇದ್ದಾಗ ಬಹಿರಂಗವಾಗಿ ಪ್ರಶ್ನಿಸುವುದು ಅನಿವಾರ್ಯವಾಗಿದೆ ಎಂದಿದ್ದಾರೆ.