ಮಂಡ್ಯ, ಜು. 09 (DaijiworldNews/MB) : ಅರೆಕೆರೆ ಗ್ರಾಮದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಶ್ರೀರಂಗಪಟ್ಟಣ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಜೆಸಿಬಿ ಚಾಲಕನ ಮೇಲೆ ಹಲ್ಲೆ ನಡೆದಿದ್ದಾರೆ ಎಂದು ವರದಿಯಾಗಿದೆ.
ಪರಿಹಾರ ನೀಡದೆಯೇ ರಸ್ತೆ ಕಾಮಗಾರಿ ನಡೆಸುವುದು ಬೇಡ ಎಂದು ಹೇಳಿ ಮಾಜಿ ಶಾಸಕ ಹಾಗೂ ಅವರ ಬೆಂಬಲಿಗರು ಕಾಮಗಾರಿಯನ್ನು ತಡೆದಿದ್ದು ಈ ಸಂದರ್ಭದಲ್ಲಿ ಜೆಸಿಬಿ ಚಾಲಕ ಮನೆ ತೆರವು ಮಾಡುವ ಕಾರ್ಯ ಮಾಡುತ್ತಲ್ಲಿದ್ದರು ಎಂದು ಹೇಳಲಾಗಿದೆ. ಈ ಕಾರಣದಿಂದ ಕೋಪಗೊಂಡ ಮಾಜಿ ಶಾಸಕರ ಬೆಂಬಲಿಗರು ಚಾಲಕರು ಕಲ್ಲು ತೂರಾಟ ಮಾಡಿದ್ದಾರೆ. ಆ ಸಂದರ್ಭದಲ್ಲಿ ಚಾಲಕ ಕೆಲಗಿಳಿದು ಓಡಿದ್ದು ಮಾಜಿ ಶಾಸಕರು ಚಾಲಕನನ್ನು ಹಿಡಿದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಬಳಿಕ ಮಹಿಳೆಯೊಬ್ಬರ ಮೇಲೆ ಜೆಸಿಬಿಯನ್ನು ಹತ್ತಿಸಲು ಯತ್ನಿಸಿದ ಕಾರಣದಿಂದ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.