ನವದೆಹಲಿ, ಜು 09 (DaijiworldNews/PY): ಭಾರತೀಯ ಪ್ರಾಚೀನ ವೈದ್ಯ ಪದ್ದತಿ ಆಯುರ್ವೇದದಿಂದ ಕೊರೊನಾ ಸೋಂಕನ್ನು ಹೊಡೆದೊಡಿಸಲು ಅಮೆರಿಕ ಇದರ ಬಳಕೆಗೆ ಪ್ರಯೋಗ ನಡೆಸಲು ಸಜ್ಜಾಗಿದೆ.
ಭಾರತ ಮತ್ತು ಅಮೆರಿಕದ ವಿಜ್ಞಾನಿಗಳು ಹಾಗೂ ನುರಿತ ವೈದ್ಯರೊಂದಿಗೆ ನಡೆದಿರುವ ಡಿಜಿಟಲ್ ಸಂವಾದದಲ್ಲಿ ಅಮೆರಿಕದ ಭಾರತೀಯ ರಾಯಭಾರಿ ತರನಜೀತ್ ಸಿಂಗ್ ಸಂಧು ಅವರು ಮಾತನಾಡಿದ್ದು, ನಾವು ಆಯುರ್ವೇದವನ್ನು ಉತ್ತೇಜಿಸಲು ಸಿದ್ದವಿದ್ದೇವೆ. ಆಯುರ್ವೇದ ಔಷಧಿಗಳ ಜಂಟಿ ಕ್ಲಿನಿಕಲ್ ಪ್ರಯೋಗವನ್ನು ಆರಂಭ ಮಾಡಲು ಭಾರತ ಹಾಗೂ ಅಮೆರಿಕದ ಸಂಶೋಧಕರು ಯೋಜನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಅಮೆರಿಕ ಮೂಲದ ಸಂಸ್ಥೆಯೊಂದಿಗೆ ಭಾರತೀಯ ಔಷಧಿ ಕಂಪೆನಿಗಳು ಸಹಯೋಗ ಹೊಂದಿವೆ. ಇದು ವಿಶ್ವದ ಶತಕೋಟಿ ಜನರಿಗೆ ಉಪಯೋಗವಾಗಲಿದೆ ಎನ್ನುವ ಭರವಸೆ ಹೊಂದಿದ್ಧಾರೆ.
ಕಡಿಮೆ ಬೆಲೆಯಲ್ಲಿ ಔಷಧಿ ಹಾಗೂ ಲಸಿಕೆಗಳನ್ನು ತಯಾರು ಮಾಡುವಲ್ಲಿ ಭಾರತೀಯ ಔಷಧಿ ಕಂಪೆನಿಗಳು ಮುಂದಿವೆ. ಕೊರೊನಾದ ವಿರುದ್ದ ಹೋರಾಡುವ ನಿಟ್ಟಿನಲ್ಲಿ ಇದು ಪ್ರಯೋಜನವಾಗಲಿದೆ ಎಂದಿದ್ದಾರೆ.