ನವದೆಹಲಿ, ಜು 09 (Daijiworld News/MSP): ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ₹13000 ಕೋಟಿ ಸಾಲ ಪಡೆದು ಮರುಪಾವತಿ ಮಾಡದೆ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ನ್ಯಾಯಾಂಗ ಬಂಧನ ಅವಧಿಯನ್ನು ಲಂಡನ್ ನ ವೆಸ್ಟ್ ಮಿನಿಸ್ಟರ್ ನ್ಯಾಯಾಲಯ ಆಗಸ್ಟ್ 6ರ ವರೆಗೆ ವಿಸ್ತರಿಸಿದೆ.
ಸದ್ಯ ಜೈಲಿನಲ್ಲಿರುವ 48 ವರ್ಷದ ನೀರವ್ ಮೋದಿಯ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಕೊನೆಗೊಂಡಿದ್ದು ಹೀಗಾಗಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಆರೋಪಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಎಮ್ಮಾ ಅರ್ಬುತ್ನೋಟ್ ಅವರು, ನ್ಯಾಯಾಂಗ ಬಂಧನ ಅವಧಿಯನ್ನು ಆಗಸ್ಟ್ 6ರ ವರೆಗೆ ವಿಸ್ತರಿಸಿದ್ದಾರೆ.
ಕೊರೊನಾವೈರಸ್ ಲಾಕ್ಡೌನ್ ನಿರ್ಬಂಧಗಳಿಂದಾಗಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತ ಎರಡನೇ ಹಂತದ ವಿಚಾರಣೆ ಮುಂದೂಡಲಾಗಿದೆ. ಈ ವಿಚಾರಣೆ ಸೆಪ್ಟೆಂಬರ್ ನಲ್ಲಿ ನಡೆಯಲಿದೆ.