ಬೆಂಗಳೂರು, ಜು 10 (DaijiworldNews/PY): ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಸಾರಿಗೆ ಸಂಸ್ಥೆಗಳು, ಅಧಿಕಾರಿ ಸೇರಿದಂತೆ ನೌಕರರಿಗೆ ವೇತನ ರಹಿತ ಒಂದು ವರ್ಷದ ತನಕ ರಜೆ ನೀಡಲು ಆಲೋಚನೆ ನಡೆಸಿವೆ.
ಈ ಬಗ್ಗೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು ರಜೆಯ ಬಗ್ಗೆ ಅಭಿಪ್ರಾಯ ಕೇಳಿದ್ದು, ಬಿಎಂಟಿಸಿ, ವಾಯವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಸಿಬ್ಬಂದಿಗಳು ಕೇಳಿದರೆ ಮಾತ್ರವೇ ರಜೆ ಮಂಜೂರು ಮಾಡಬಹುದಾಗಿದೆ. ನಿಗಮದಲ್ಲೇ ರಜೆ ಪಡೆದವರ ಹಕ್ಕು ಉಳಿಯಲಿದೆ ಎಂದು ಹೇಳಿದ್ದಾರೆ.
ಹೆಚ್ಚಿನ ವಿದ್ಯಾಭ್ಯಾಸ ಸೇರಿದಂತೆ ಆರೋಗ್ಯ ಸಮಸ್ಯೆ ಕೋರಿ ಅರ್ಜಿ ಸಲ್ಲಿಸಿದವರಿಗೆ 5 ವರ್ಷಗಳ ತನಕ ವಿಶೇಷ ರಜೆ ಮಂಜೂರು ಮಾಡುವ ಅವಕಾಶವಿತ್ತು. ಈ ರಜೆ ಮಂಜೂರು ಮಾಡುವುದು ಹೊಸ ಪದ್ದತಿ ಅಲ್ಲ. ಈ ಬಗ್ಗೆ ಇನ್ನೂ ಆದೇಶ ಆಗಿಲ್ಲ. ಬದಲಾಗಿ ಅಭಿಪ್ರಾಯ ಪಡೆದುಕೊಂಡಿದ್ದೇವೆ ಎಂದಿರು.