ಬೆಂಗಳೂರು, ಜು 10 (DaijiworldNews/PY): ಬೆಂಗಳೂರಿನಲ್ಲಿ ಕೊರೊನಾ ವ್ಯಾಪಿಸುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಚಿವರು ಸೇರಿದಂತೆ ಮುಖ್ಯಮಂತ್ರಿ ಕಾರ್ಯದರ್ಶಿ, ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಈ ಬಗ್ಗೆ ತಿಳಿಸಿರುವ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಸಚಿವ ಸಂಪುಟದಲ್ಲಿ ಸೋಂಕು ಹೆಚ್ಚಾಗುತ್ತಿರುವ ಬಗ್ಗೆ ಚರ್ಚೆ ನಡೆದಿದ್ದು, ಸಿಎಂ ಅವರು, ಕೊರೊನಾ ನಿಯಂತ್ರಿಸಲು ಎಲ್ಲಾ ಸಚಿವರೂ ಕಾರ್ಯ ನಿರ್ವಹಿಸಿಬೇಕು ಎಂದು ಹೇಳಿರುವುದಾಗಿ ತಿಳಿಸಿದರು.
ಆರ್.ಅಶೋಕ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಎಸ್.ಸುರೇಶ್ ಕುಮಾರ್, ಕೆ.ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಬೈರತಿ ಬಸವರಾಜ್ ಹಾಗೂ ವಿ.ಸೋಮಣ್ಣ ವಲಯಗಳ ಉಸ್ತುವಾರಿಯಾಗಿದ್ದಾರೆ.
ದಕ್ಷಿಣ-ಮುನೀಶ್ ಮೌದ್ಗಿಲ್, ಬೆಂಗಳೂರು ಪೂರ್ವ-ತುಷಾರ್ ಗಿರಿನಾಥ್, ದಾಸರಹಳ್ಳಿ-ಪಿ.ಸಿ.ಜಾಫರ್, ಯಲಹಂಕ-ನವೀನ್ರಾಜ್ ಸಿಂಗ್, ಪಶ್ಚಿಮ-ರಾಜೇಂದ್ರ ಕುಮಾರ್ ಕಟಾರಿಯಾ, ಆರ್.ಆರ್.ನಗರ- ಆರ್.ವಿಶಾಲ್, ಮಹದೇವಪುರ-ಡಾ.ಎನ್.ಮಂಜುಳಾ ಹಾಗೂ ಬೊಮ್ಮನಹಳ್ಳಿ-ಪಿ.ಮಣಿವಣ್ಣನ್ ಐಎಎಸ್ ಅಧಿಕಾರಿಗಳಾಗಿದ್ದಾರೆ.