ನವದೆಹಲಿ, ಜು 10 (DaijiworldNews/PY): ಜುಲೈ 12 ರಿಂದ 26 ರವರೆಗೆ ಉಭಯ ದೇಶಗಳ ನಡುವೆ ವಿಶೇಷ ವಿಮಾನ ಹಾರಾಟ ನಡೆಸಲು ಭಾರತ ಮತ್ತು ದುಬೈ ನಾಗರಿಕ ವಿಮಾನಯಾನ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ.
ಇದರ ಪ್ರಕಾರ, ದುಬೈಯಿಂದ ಭಾರತೀಯರನ್ನು ತವರಿಗೆ ಕರೆತರಲು ಚಾರ್ಟರ್ಡ್ ವಿಮಾನಗಳಿಗೆ ಐಸಿಎ ಅನುಮೋದಿತ ದುಬೈ ನಿವಾಸಿಗಳನ್ನು ತಮ್ಮ ತವರಿಗೆ ಕರೆತರಲು ಅನುಮತಿಸಲಾಗುವುದು ಎಂದು ತಿಳಿಸಿದೆ.
ಇದಲ್ಲದೆ, ದುಬೈಯಿಂದ ಭಾರತೀಯರನ್ನು ಮರಳಿ ಕರೆತರಲು ವಿಶೇಷ ವಿಮಾನಗಳನ್ನು ನಿರ್ವಹಿಸುವ ಭಾರತೀಯ ವಾಹಕಗಳಿಗೆ ಐಸಿಎ ಅನುಮೋದಿತ ದುಬೈ ನಿವಾಸಿಗಳನ್ನು ಭಾರತದಿಂದ ಕೊಲ್ಲಿ ದೇಶಕ್ಕೆ ಸಾಗಿಸಲು ಅನುಮತಿ ನೀಡಲಾಗುವುದು.
ಭಾರತ ಮತ್ತು ದುಬೈ ನಡುವಿನ ನಿಕಟ ಕಾರ್ಯತಂತ್ರದ ಸಹಭಾಗಿತ್ವದ ಭಾಗವಾಗಿ ಮತ್ತು ಪ್ರಸ್ತುತ ಭಾರತದಲ್ಲಿರುವ ದುಬೈ ನಿವಾಸಿಗಳಿಗೆ ದುಬೈಗೆ ಮರಳಲು ಸಹಾಯ ಮಾಡುವ ಉದ್ದೇಶದಿಂದ, ಎರಡೂ ದೇಶಗಳ ನಾಗರಿಕ ವಿಮಾನಯಾನ ಅಧಿಕಾರಿಗಳು ವಿಶೇಷ ವಿಮಾನಗಳ ವ್ಯವಸ್ಥೆಯನ್ನು ಮಾಡಲು ಒಪ್ಪಿಕೊಂಡಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ದುಬೈನಲ್ಲಿ ಉಳಿದಿದ್ದ ಉತ್ತರಾಖಂಡದ ಸುಮಾರು 500 ನಿವಾಸಿಗಳನ್ನು ಕರೆತರಲು ವಿಶೇಷ ವಿಮಾನಗಳ ವ್ಯವಸ್ಥೆ ಮಾಡಲಾಗಿತ್ತು ಎಂದು ಅವರು ಟ್ವೀಟ್ ಮಾಡಿದ್ದರು.
ದುಬೈನಲ್ಲಿ ಸಿಲುಕಿರುವ ಹಾಗೂ ಸಂಕಷ್ಟಕ್ಕೊಳಗಾದ ಸುಮಾರು 500 ಉತ್ತರಾಖಂಡ ನಿವಾಸಿಗಳ ಬಗ್ಗೆ ಚರ್ಚೆ ನಡೆಸಿದ್ದು, ಅವರಿಗೆ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಲಾಗುವುದು ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ. ಈ ವಿಚಾರವನ್ನು ಖಚಿತಪಡಿಸಿಕೊಳ್ಳಲು ನನ್ನ ಕಚೇರಿಯು ಅದರ ಸಂಪರ್ಕದಲ್ಲಿದೆ ಎಂದು ಸಹವರ್ತಿ ಆರ್ಎಸ್ ಸಂಸದೀಯ ಅನಿಲ್ ಬಲೂನಿ ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.