ಬೆಂಗಳೂರು, ಜು 10 (Daijiworld News/MSP): 26 ವರ್ಷಗಳ ಕಾಲ ಭೂಗತ ಜಗತ್ತನ್ನು ಆಳಿ, ಈಗ ಪೊಲೀಸ್ ಬಲೆಗೆ ಬಿದ್ದಿರುವ ರವಿ ಪೂಜಾರಿ ವಿರುದ್ದ ಸಿಸಿಬಿ ಪೊಲೀಸರು ಮತ್ತೊಂದು ಚಾರ್ಜ್ ಶೀಟ್ ಸಲ್ಲಿಕೆಗೆ ಮುಂದಾಗಿದ್ದಾರೆ.
2009ರಲ್ಲಿ ಇಂದಿರಾ ನಗರದಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಯೂ ಟಿವಿ ಮಾಧ್ಯಮ ಸಂಸ್ಥೆ ಹಫ್ತಾ ನೀಡುವಂತೆ ರವಿ ಪೂಜಾರಿ ಬೆದರಿಕೆ ಹಾಕಿದ್ದ. ಒಂದು ವೇಳೆ ಹಣ ನೀಡದಿದ್ದಾರೆ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ದಿದ್ದ. " ನಿಮ್ಮ ಮಾಲೀಕನಿಗೆ ನೀಡುವ ಕೊನೆ ವಾರ್ನಿಂಗ್ ಇದು " ಎಂದು ರವಿ ಪೂಜಾರಿ ಗ್ಯಾಂಗ್ ಮಾಧ್ಯಮ ಸಂಸ್ಥೆಯ ಜಮಾಲ್ ಎಂಬವರ ಮೇಲೆ ಹಲ್ಲೆ ನಡೆಸಿತ್ತು ಮತ್ತೆ ಹಣ ನೀಡುವಂತೆ ಬೆದರಿಕೆ ಒಡ್ಡಿತ್ತು . ಈ ಘಟನೆ ಕುರಿತು ಅಂದು ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
2007ರ ಫೆ. 15ರಂದು ಶಬನಮ್ ಡೆವಲಪರ್ಸ್ ಮಾಲೀಕರಾದ ಶೈಲಜಾ ಮತ್ತು ರವಿ ಎಂಬುವವರನ್ನು ಹತ್ಯೆ ಪ್ರಕರಣ , ಹಾಗೂ ಬೆಂಗಳೂರಿನ ವೈಟ್ ಫೀಲ್ಡ್ನ ದೇವಸ್ಥಾನದ ಟ್ರಸ್ಟಿ ಮೇಲೆ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೂಜಾರಿ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಲಾಗಿದೆ
ಕಳೆದ ಎರಡು ದಶಕಗಳಿಂದ ತಲೆ ಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ಸಿಸಿಬಿ ಪೊಲೀಸರು ಫೆ. 23ರಂದು ದಕ್ಷಿಣ ಅಫ್ರಿಕಾದ ಸೆನೆಗಲ್ನಿಂದ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು.