ಬೆಂಗಳೂರು, ಜು 10 (DaijiworldNews/PY): ಮುಂದಿನ ದಿನಗಳಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿ ಆಶಿಸುತ್ತೇನೆ ಎಂದು ಟಿ.ಎ ಶರವಣ ಹೇಳಿದರು.
ಶುಕ್ರವಾರ ವಿಧಾನಸೌಧದಲ್ಲಿ ಅವಧಿ ಪೂರ್ಣಗೊಳಿಸಿದ 15 ಮಂದಿ ವಿಧಾನ ಪರಿಷತ್ ಸದಸ್ಯರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುನಃ ನಾನು ಆಯ್ಕೆ ಆಗುತ್ತೇನೆ ಎನ್ನುವ ನಿರೀಕ್ಷೆಯಲ್ಲಿದ್ದೆ. ಆದರೆ, ಈ ವಿಚಾರವು ನನಗೆ ನಿರಾಸೆಯುಂಟುಮಾಡಿದೆ. ಮುನ್ನೂರು ಜನ ಶಾಸಕರಲ್ಲಿ ನಾನು ಇದ್ದೇನೆ ಎನ್ನುವುದು ಸಂತಸ ತಂದಿದೆ. ಕೋಟಾ ಶ್ರೀನಿವಾಸ ಪೂಜಾರಿ ಅವ ಸಜ್ಜನ ವ್ಯಕ್ತಿ. ಮುಂಬರುವ ದಿನಗಳಲ್ಲಿ ಅವರು ಸಿಎಂ ಆಗಲಿ ಎಂದು ಹಾರೈಸುತ್ತೇನೆ ಎಂದರು.
ಈ ಸಂದರ್ಭ ಮಾತನಾಡಿದ ತಿಪ್ಪಣ್ಣ ಕಮಕನೂರು ಅವರು, ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಸಹೋದರನ ಸ್ಥಾನದಲ್ಲಿ ಕಂಡಿದ್ದೇನೆ. ಸಭಾಪತಿಗಳನ್ನು ತಂದೆಯ ಸ್ಥಾನದಲ್ಲಿ ನೋಡಿದ್ದೇನೆ. ನಾನು ಹಿಂದುಳಿದ ಸಮುದಾಯದಿಂದ ಬಂದಿದ್ದು, ನನಗೆ ಉತ್ತಮವಾದ ಅವಕಾಶ ಕಲ್ಪಿಸಿದ್ದೀರಿ ಎಂದು ಹೇಳಿದರು.