ಮಡಿಕೇರಿ, ಜು 10 (DaijiworldNews/PY): ವೈದ್ಯಕೀಯ ಉಪಕರಣ ಖರೀದಿಗೆ ಸಂಬಂಧಪಟ್ಟಂತೆ ಯಾವುದೇ ಅಕ್ರಮವಾಗಿಲ್ಲ. ಅಲ್ಲದೇ, ಖರೀದಿ ಮಾಡಲಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿಲ್ಲ. ಸಿದ್ದರಾಮಯ್ಯ ಅವರ ಕೆಲಸ ಹಿಟ್ ಆಂಡ್ ರನ್ ರೀತಿಯದ್ದು ಎಂದು ವಸತಿ ಸಚಿವ ಶುಕ್ರವಾರ ಹೇಳಿದರು.
ಸಿದ್ದರಾಮಯ್ಯ ಆರೋಪ ಮಾಡಿ ಪಲಾಯನ ಮಾಡುವುದು ಸೂಕ್ತವಲ್ಲ. ಅವರು ಐದು ವರ್ಷ ಸಿಎಂ ಆಗಿದ್ದವರು. ಅವರಲ್ಲಿ ದಾಖಲೆಗಳಿದ್ದರೆ ಸಿಎಂ ಅವರಿಗೆ ನೀಡಲಿ. ಸಿಎಂ ಬಿಎಸ್ವೈ ಅವರೇ ವಿರೋಧ ಪಕ್ಷದ ಮುಖಂಡರ ಸಭೆ ಕರೆದಿದ್ದರು. ಈ ಸಂದರ್ಭ ಅವ್ಯವಹಾರದ ದಾಖಲಿಗಳನ್ನು ಸಲ್ಲಿಸುವಂತೆ ಕೇಳಿದ್ದರು. ಆ ವೇಳೆ ಸಿದ್ದರಾಮಯ್ಯ ಅವರಿಗೆ ದಾಖಲೆಗಳಿದಿದ್ದರೆ ನೀಡಬಹುದಿತ್ತು. ಎಂದರು.
ವೈದ್ಯಕೀಯ ಉಪಕರಣಗಳ ಖರೀದಿಯ ಬಗ್ಗೆ ಮಾತನಾಡಿದ ಅವರು, ಇದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ವೈದ್ಯಕೀಯ ಉಪಕರಣಗಳನ್ನು ಖರೀದಿ ಮಾಡಿಲ್ಲ ಎಂದು ತಿಳಿಸಿದರು.