ಮೈಸೂರು, ಜು.11 (DaijiworldNews/MB) : ಆಷಾಢ ಶುಕ್ರವಾರ ಕಾರಣದಿಂದ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿದ್ದರೂ ಕೂಡಾ ಕೊರೊನಾದ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಚಾಮುಂಡೇಶ್ವರಿ ದೇವಾಲಯಕ್ಕೆ ವಿಐಪಿಗಳು ಶುಕ್ರವಾರ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.
ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಕಾರಣದಿಂದ ಚಾಮುಂಡೇಶ್ವರಿ ದೇವಾಲಯಕ್ಕೆ ದೇವಾಲಯಕ್ಕೆ ನಾಲ್ಕು ಆಷಾಢ ಶುಕ್ರವಾರದಂದು ಸಾರ್ವಜನರಿಕರ ಪ್ರವೇಶಕ್ಕೆ ಮೈಸೂರು ಜಿಲ್ಲಾ ಆಡಳಿತ ಮಂಡಳಿಯು ನಿರ್ಬಂಧ ಹೇರಿದೆ. ಆದರೆ ಆಷಾಢ ಶುಕ್ರವಾರವಾದ ಜುಲೈ ೧೦ ರಂದು ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಪ್ರತಾಪ್ ಸಿಂಹ, ನಟ ದರ್ಶನ್, ಉಪ ಮೇಯರ್ ಶ್ರೀಧರ್, ಶಾಸಕ ನಾಗೇಂದ್ರ ಹಾಗೂ ಅವರು ಕುಟುಂಬ ಸೇರಿದಂತೆ ಹಲವು ವಿಐಪಿಗಳು, ನಟರು ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
ಅಷ್ಟೇ ಅಲ್ಲದೇ ಈ ಸಂದರ್ಭದಲ್ಲಿ ಎಲ್ಲಾ ಕೊರೊನಾ ನಿಯಮಗಳ ಉಲ್ಲಂಘನೆ ನಡೆದಿದ್ದು ಥರ್ಮಲ್ ಸ್ಕ್ರೀನಿಂಗ್ ಮಾಡದೆ ಸ್ಯಾನಿಟೈಸರ್ ಬಳಸದೆಯೇ ಯಾವುದೇ ಸಾಮಾಜಿಕ ಅಂತರವಿಲ್ಲದೆ ದೇವರ ದರ್ಶನ ಪಡೆಯಲಾಗಿದೆ ಎಂದು ಆರೋಪಿಸಲಾಗಿದ್ದು ಜನ ಸಾಮಾನ್ಯರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜನರಿಗೆ ಒಂದು ಕಾನೂನು ಹಾಗೂ ವಿಐಪಿಗಳಿಗೆ ಒಂದು ಕಾನೂನಾ? ಎಂದು ಜನರ ಪ್ರಶ್ನೆಯಾಗಿದೆ.