ನವದೆಹಲಿ, ಜು.11 (DaijiworldNews/MB) : ತಾಯಿಗೆ ಕೊರೊನಾ ಸೋಂಕು ನೆಗೆಟಿವ್ ಆಗಿದ್ದರೂ ಕೂಡಾ ನವಜಾತ ಶಿಶುವಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿರುವ ಘಟನೆ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ನಡೆದಿದ್ದು ಭ್ರೂಣದಲ್ಲೇ ಸೋಂಕು ತಗುಲಿರುವ ವಿಶ್ವದ ಮೊದಲ ಪ್ರಕರಣ ಇದಾಗಿದೆ.
ತಾಯಿಗೆ ಜೂ.11 ರಂದು ಕೊರೊನಾ ಪಾಸಿಟಿವ್ ಆಗಿದ್ದು ಜೂ.27 ರಂದು ಕೂಡಾ ಸೋಂಕು ಪಾಸಿಟಿವ್ ಆಗಿತ್ತು. ಆದರೆ ಜು.7 ರಂದು ಸೋಂಕು ನೆಗೆಟಿವ್ ಬಂದಿತ್ತು. ಜುಲೈ 8 ರಂದು ಹೆರಿಗೆಯಾಗಿದೆ. ಆದರೆ ಹೆರಿಗೆಯಾದ 6 ಗಂಟೆಗಳ ಬಳಿಕ ಪರೀಕ್ಷೆ ನಡೆಸಿದಾಗ ಪಾಸಿಟವ್ ಆಗಿದ್ದು ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯರು ಭ್ರೂಣದಲ್ಲೇ ಸೋಂಕು ತಗುಲಿರುವ ವಿಶ್ವದ ಮೊದಲ ಪ್ರಕರಣ ಇದಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಮಗುವಿನಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದರೂ ಕೂಡಾ ಮಗು ಆರೋಗ್ಯವಾಗಿದೆ. ಯಾವುದೇ ಕೊರೊನಾ ಲಕ್ಷಣಗಳು ಕೂಡಾ ಕಂಡು ಬಂದಿಲ್ಲ. ಇನ್ನು 48 ಗಂಟೆಗಳ ಬಳಿಕ ಮತ್ತೆ ಕೊರೊನಾ ಪರೀಕ್ಷೆ ನಡೆಸಲಾಗುವುದು ಎಂದು ಡಾ. ರಾಹುಲ್ ಚೌಧರಿ ಮಾಹಿತಿ ನೀಡಿದ್ದಾರೆ.