ಬೆಂಗಳೂರು, ಜು.12 (DaijiworldNews/MB) : ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಹೇರಲಾಗಿರುವ ಭಾನುವಾರದ ಲಾಕ್ಡೌನ್ ಶನಿವಾರ ರಾತ್ರಿ 8 ಗಂಟೆಯಿಂದಲೇ ಜಾರಿಯಾಗಿದ್ದು ಇಂದು ರಾಜ್ಯದಾದ್ಯಂತ ಬಹುತೇಕ ವ್ಯಾಪಾರ ವಹಿವಾಟುಗಳು ಸ್ಥಗಿತವಾಗಿದೆ.
ಎರಡನೇ ಹಂತದ ಅನ್ಲಾಕ್ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ನಾಲ್ಕು ವಾರಗಳ ಕಾಲ ಪ್ರತಿ ಭಾನುವಾರ ಲಾಕ್ಡೌನ್ಗೆ ಆದೇಶಿಸಿದ್ದಾರೆ. ಆ ಆದೇಶದಂತೆ ಕಳೆದ ಭಾನುವಾರ ಕರ್ನಾಟಕದಾದ್ಯಂತ ಲಾಕ್ಡೌನ್ ಆಗಿತ್ತು.
ಇಂದು ಎರಡನೇ ವಾರದ ಸಂಡೇ ಲಾಕ್ಡೌನ್ ಆಗಿದ್ದು ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಮತ್ತೆ ಯಾವುದೇ ವ್ಯಾಪಾರ ವಹಿವಾಟು ನಡೆಸಲು ಅವಕಾಶವಿಲ್ಲ. ಹಾಗೆಯೇ ಈ ಸಂಡೇ ಲಾಕ್ಡೌನ್ ನಾಳೆ ಬೆಳಿಗ್ಗೆ 5 ಗಂಟೆಯವರೆಗೂ ಜಾರಿಯಲ್ಲಿರಲಿದೆ.