ಶ್ರೀನಗರ್, ಜು 12 (DaijiworldNews/PY): ಭಾರತದೊಳಕ್ಕೆ ನುಸುಳಲು ಗಡಿ ನಿಯಂತ್ರಣ ರೇಖೆ ಬಳಿಯ ಲಾಂಚ್ ಪ್ಯಾಡ್ನಲ್ಲಿ ಸುಮಾರು 200 ರಿಂದ 300 ಉಗ್ರರು ಒಳನುಸುಳಲು ಕಾಯುತ್ತಿದ್ದಾರೆ ಎಂಬುದಾಗಿ ಭಾರತೀಯ ಸೇನೆ ಎಚ್ಚರಿಸಿದೆ.
ಗಡಿ ನಿಯಂತ್ರಣ ರೇಖೆ ಬಳಿಯ ಲಾಂಚ್ ಪ್ಯಾಡ್ನಲ್ಲಿರುವ ಉಗ್ರರು ಪಾಕ್ನ ಬೆಂಬಲಿತ ಉಗ್ರರಾಗಿದ್ದು, ಅವಕಾಶ ಸಿಕ್ಕಿದರೆ ಭಾರತದ ಗಡಿಯೊಳಕ್ಕೆ ನುಗ್ಗಲು ಸಿದ್ದರಾಗಿರುವುದಾಗಿ ವರದಿ ತಿಳಿಸಿದೆ.
ಭದ್ರತಾ ಪಡೆಯು ಶನಿವಾರ ಬೆಳಗ್ಗೆ ನೌಗಾಮ್ ಸೆಕ್ಟರ್ ಬಳಿ ಗಡಿಯ ಒಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಉಗ್ರರನ್ನು ವಿಫಲಗೊಳಿಸಿ ಬಳಿಕ ಇಬ್ಬರನ್ನು ಎನ್ಕೌಂಟರ್ನಲ್ಲೆ ಸದೆಬಡೆದಿದ್ದರು.
ಸೇನಾ ಮೂಲಗಳ ಅಂದಾಜಿನ ಪ್ರಕಾರ ಸುಮಾರು 250 ರಿಂದ 300 ಉಗ್ರರು ಅಡಗಿರುವ ಸಂಶಯ ಇದ್ದು, ಉಗ್ರರು ಸಂಪೂರ್ಣವಾಗಿ ಗಡಿ ನಿಯಂತ್ರಣ ರೇಖೆಯ ಬಳಿಯ ಲಾಂಚ್ ಪ್ಯಾಡ್ ಅನ್ನು ಆಕ್ರಮಿಸಿಕೊಂಡಿರುವುದಾಗಿ ತಿಳಿಸಿವೆ.