ನವದೆಹಲಿ, ಜು 12 (DaijiworldNews/PY): ಕೆಲವು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಯುವ ಪಿಸಿಎಸ್ ಅಧಿಕಾರಿ ಮಣಿ ಮಂಜರಿ ರೈ ಅವರ ಸಾವಿನ ಬಗ್ಗೆ ಪಾರದರ್ಶಕ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ ಒತ್ತಾಯಿಸಿದ್ದಾರೆ.
ಮಣಿ ಮಂಜರಿ ಅವರ ಕುಟುಂಬಕ್ಕೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಎಲ್ಲ ಅಧಿಕಾರಿಗಳಿಗೆ ನ್ಯಾಯ ಒದಗಿಸಲು ಈ ವಿಷಯದಲ್ಲಿ ಸಮಗ್ರ ಮತ್ತು ಪಾರದರ್ಶಕ ತನಿಖೆ ಬಹಳ ಅವಶ್ಯಕವಾಗಿದೆ. ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಪತ್ರ ಬರೆದು ಪಾರದರ್ಶಕ ತನಿಖೆ ನಡೆಸಿ ಎಲ್ಲ ಸಂಗತಿಗಳನ್ನು ಮುನ್ನೆಲೆಗೆ ತರುವಂತೆ ವಿನಂತಿಸಿದ್ದೇನೆ. ಮಣಿ ಮಂಜರಿ ರಾಯ್ ಅವರ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರಿಯಾಂಕ ಗಾಂಧಿ ಪತ್ರದಲ್ಲಿ ಹೇಳಿದ್ದಾರೆ.
ಬಾಲಿಯಾಕ್ಕೆ ನೇಮಕಗೊಂಡಿದ್ದ ಯುವ ಮತ್ತು ಪ್ರಾಮಾಣಿಕ ಅಧಿಕಾರಿ ತಮ್ಮ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಣಿ ಮಂಜರಿ ರೈ (27) ಕಳೆದ ಸೋಮವಾರ ತನ್ನ ಬಾಡಿಗೆ ವಸತಿಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಆಕೆಯ ತಂದೆ ಇದು ಹತ್ಯೆ ಎಂದು ದೂರಿದ್ದರು.