ಕೋಲ್ಕತ್ತಾ, ಜು.13 (DaijiworldNews/MB) : ಪಶ್ಚಿಮ ಬಂಗಾಳದ ಹೆಮ್ಟಾಬಾದ್ನ ಬಿಜೆಪಿ ಶಾಸಕ ದೇಬೇಂದ್ರನಾಥ ರಾಯ್ ಅವರು ತನ್ನ ಹುಟ್ಟೂರಾದ ಉತ್ತರ ದಿನಜ್ಪುರ ಜಿಲ್ಲೆಯ ಬಿಂದಲ್ನ ಮಾರುಕಟ್ಟೆಯ ಕಟ್ಟಡವೊಂದರ ಮುಂಭಾಗದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಹತ್ಯೆಯ ಶಂಕೆ ಉಂಟಾಗಿದೆ.
ರಾತ್ರಿ ಸುಮಾರು ಒಂದು ಗಂಟೆಗೆ ಕೆಲವರು ಬಂದು ದೇಬೇಂದ್ರನಾಥ ರಾಯ್ ಅವರನ್ನು ಮನೆಯಿಂದ ಕರೆದು ಕೊಂಡು ಹೋಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದು ಅವರನ್ನು ಯಾರೋ ಹತ್ಯೆಗೈದು ನೇಣಿಗೇರಿಸಿದ್ದಾರೆ ಎಂಬುದು ಸ್ಥಳಿಯರ ಆರೋಪವಾಗಿದೆ. ಇನ್ನು ಬಿಜೆಪಿ ನಾಯಕರು, ಇದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಾಳಿಯ ಒಂದು ಭಾಗವಾಗಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲೂ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದ್ದು ಈ ಹತ್ಯೆ ರಾಜಕೀಯ ಪ್ರೇರಿತವಾದುದ್ದು ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರ ಆರೋಪವಾಗಿದೆ.
ದೇಬೇಂದ್ರನಾಥ್ ರಾಯ್ ಅವರು ಹೆಮ್ಟಾಬಾದ್ ಕ್ಷೇತ್ರದಲ್ಲಿ ಸಿಪಿಐಎಂ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದು ಬಳಿಕ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಸೇರಿ ಬಿಜೆಪಿ ಟಿಕೆಟ್ ಮೂಲಕ ಸ್ಪರ್ಧಿಸಿ ಮರು ಆಯ್ಕೆಯಾಗಿದ್ದರು.