ನವದೆಹಲಿ, ಜು.13 (DaijiworldNews/MB) : ಡಿಜಿಟಲ್ ಇಂಡಿಯಾಗಾಗಿ ಬರೋಬ್ಬರಿ 75 ಸಾವಿರ ಕೋಟಿ ರುಪಾಯಿ ಹೂಡಿಕೆ ಮಾಡಲು ಗೂಗಲ್ ಮುಂದಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಗೂಗಲ್ ಸಿಇಒ ಸುಂದರ್ ಪಿಚೈ, ಭಾರತದ ಡಿಜಿಟಲೀಕರಣಕ್ಕಾಗಿ 75 ಸಾವಿರ ಕೋಟಿ ರುಪಾಯಿ ಹೂಡಿಕೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾದ ಬೆಂಬಲಿಸಲು ದೃಷ್ಟಿಕೋನಕ್ಕೆ ಬೆಂಬಲ ನೀಡಲು ನಾವು ಹೆಮ್ಮೆಪಡುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದು, ಇಂದು ಬೆಳಿಗ್ಗೆ ಸುಂದರ್ ಪಿಚೈ ಅವರೊಂದಿಗೆ ಅತ್ಯಂತ ಫಲಪ್ರದವಾದ ಸಂವಾದವನ್ನು ನಡೆಸಿದ್ದೇನೆ. ನಾವು ವಿಶೇಷವಾಗಿ ಭಾರತದ ರೈತರು, ಯುವಕರು ಮತ್ತು ಉದ್ಯಮಿಗಳ ಜೀವನವನ್ನು ಪರಿವರ್ತಿಸಲು ತಂತ್ರಜ್ಞಾನದ ಶಕ್ತಿಯನ್ನು ಹೆಚ್ಚಿಸುವ ಬಗ್ಗೆ ಮಾತನಾಡಿದೆವು ಎಂದು ಹೇಳಿದ್ದಾರೆ.