ಬೆಂಗಳೂರು, ಜು.14 (DaijiworldNews/MB) : ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಪರೀಕ್ಷೆಗೆ 26 ಅಂಕಗಳನ್ನು ಗ್ರೇಸ್ ಮಾರ್ಕ್ಸ್ ಆಗಿ ಪರಿಗಣಿಸಿ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಟ್ವೀಟ್ ಮಾಡಿರುವ ಸ್ಕ್ರೀನ್ಶಾಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಸುರೇಶ್ ಅವರು ಅದು ಸುಳ್ಳು ಸುದ್ದಿ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
''ಜೂನ್ 18 ರಂದು ನಡೆಸಲಾದ ಇಂಗ್ಲೀಷ್ ಪರೀಕ್ಷೆಗೆ ಗ್ರೇಸ್ ಮಾರ್ಕ್ ನೀಡುವಂತೆ ಹಲವು ವಿದ್ಯಾರ್ಥಿಗಳು ಕರೆ ಮಾಡಿ ಕೇಳುತ್ತಿದ್ದಾರೆ. ಹೀಗಾಗಿ ಇಂಗ್ಲೀಷ್ ವಿಷಯಕ್ಕೆ 26 ಗ್ರೇಸ್ ಮಾರ್ಕ್ಗಳನ್ನು ನೀಡುವಂತೆ ಎಲ್ಲಾ ಮೌಲ್ಯಮಾಪಕರಿಗೆ ನೋಟಿಸ್ ಕಳುಹಿಸಲಾಗಿದೆ. ಹಾಗೆಯೇ ಅವರು ಪರೀಕ್ಷೆಯನ್ನು ಬರೆದಿದ್ದರೆ ಮಾತ್ರ'' ಎಂದು ಸಚಿವ ಸುರೇಶ್ ಕುಮಾರ್ ಅವರು ಜುಲೈ 13 ರಂದು ಟ್ವೀಟ್ ಮಾಡಿರುವಂತೆ ಟ್ವೀಟ್ನ ಸ್ಕ್ರೀನ್ಶಾಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಜುಲೈ 14 ರ ಮಂಗಳವಾರ ಸ್ಪಷ್ಟನೆ ನೀಡಿರುವ ಅವರು ಇದು ಸುಳ್ಳು ಸುದ್ದಿ ಎಂದು ಟ್ವೀಟ್ ಮಾಡಿದ್ದಾರೆ.