ನವದೆಹಲಿ, ಜು.13 (DaijiworldNews/MB) : ಕೇಂದ್ರದ ವಿರುದ್ದ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದಿನಿಂದ ತಮ್ಮದೇ ಆದ ಮನ್ ಕಿ ಬಾತ್ ಆರಂಭದ ಬಗ್ಗೆ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಇಂದು ಭಾರತೀಯ ಸುದ್ದಿ ಮಾಧ್ಯಮದ ಬಹುಪಾಲು ಭಾಗವನ್ನು ಫ್ಯಾಸಿಸ್ಟ್ ಹಿತಾಸಕ್ತಿಗಳು ಸೆರೆಹಿಡಿದಿವೆ. ಟಿವಿ ಚಾನಲ್ಗಳಲ್ಲಿ ಹಾಗೂ ವಾಟ್ಸಾಪ್ ಫಾರ್ವರ್ಡ್ಗಳಲ್ಲಿ ಹಾಗೂ ಸುಳ್ಳು ಸುದ್ದಿಗಳಲ್ಲಿ ದ್ವೇಷ ತುಂಬಿದ ಸುದ್ದಿಗಳು ಹರಡುತ್ತಿದೆ. ಈ ಸುಳ್ಳು ಸುದ್ದಿಗಳು ಭಾರತವನ್ನು ವಿಭಜಿಸುತ್ತಿದೆ'' ಎಂದು ಹೇಳಿದ್ದಾರೆ.
''ಸತ್ಯದ ಮೇಲೆ ಆಸಕ್ತಿ ಇರುವವರಿಗೆ ನಾನು ಪ್ರಸ್ತುತ ವ್ಯವಹಾರಗಳು, ಇತಿಹಾಸ ಮತ್ತು ಬಿಕ್ಕಟ್ಟನ್ನು ಸ್ಪಷ್ಟಪಡಿಸಬಯಸುತ್ತೇನೆ. ನಾಳೆಯಿಂದ ನಾನು ನನ್ನ ಆಲೋಚನೆಗಳನ್ನು ನಿಮ್ಮೊಂದಿಗೆ ವೀಡಿಯೊದಲ್ಲಿ ಹಂಚಿಕೊಳ್ಳುತ್ತೇನೆ'' ಎಂದು ಜುಲೈ 13 ರ ಸೋಮವಾರ ಟ್ವೀಟ್ ಮಾಡಿದ್ದಾರೆ.
ಇನ್ನು ರಾಹುಲ್ ಗಾಂಧಿ ಟೆಲಿಗ್ರಾಮ್ನಲ್ಲೂ ಕೂಡ ತಮ್ಮ ಖಾತೆ ತೆರೆದಿದ್ದಾರೆ.