ಬೆಂಗಳೂರು, ಜು14 (Daijiworld News/MSP): ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣದ ನಿಯಂತ್ರಣಕ್ಕೆ ಸರ್ಕಾರ ಮತ್ತೊಂದು ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ.
ಈ ಬಗ್ಗೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದ್ದು ಗಂಟಲು ದ್ರವ ಪರೀಕ್ಷೆಗೊಳಪಟ್ಟವರು ಪರೀಕ್ಷಾ ವರದಿ ಬರುವವರೆಗೂ ಐಸೋಲೇಷನ್, ಕ್ವಾರಂಟೈನ್ ಕಡ್ಡಾಯವಾಗಿ ಪಾಲಿಸಬೇಕು ಎಂದಿದೆ.
ಕೊವೀಡ್ -19 ಸೋಂಕಿನ ಪರೀಕ್ಷೆಗಾಗಿ ಗಂಟಲಿನ ದ್ರವ ಮಾದರಿ ಕೊಟ್ಟಿದ್ದರೆ ಅಂತಹ ವ್ಯಕ್ತಿಗಳು, ಪರೀಕ್ಷಾ ವರದಿ ಬರೋ ತನಕ ಐಸೋಲೇಷನ್ನಲ್ಲಿರುವುದು ಕಡ್ಡಾಯವಾಗಿದೆ. ಫಲಿತಾಂಶ ಬರುವ ಮುನ್ನ ಅಜಾಗರೂಕತೆಯಿಂದ ಇತರರೊಂದಿಗೆ ಬೆರೆಯುವುದು, ಕಚೇರಿಗಳಿಗೆ ಹೋಗಿ ಕೆಲಸ ಮಾಡುವುದು. ಮನೆಯಿಂದ ಹೊರಗೆ ಸುತ್ತಾಡುವುದು ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.