ನವದೆಹಲಿ, ಜು.14 (DaijiworldNews/MB) : ಬೈಕ್ನಲ್ಲಿ ಸ್ಟಂಟ್ ಮಾಡಬೇಡಿ ಎಂದು ಬುದ್ಧಿವಾದ ಹೇಳಿದ್ದಕ್ಕೆ ಯುವಕನ ಮೇಲೆ ಪುಡಾರಿಗಳು ಹಲ್ಲೆಗೈದು ಹತ್ಯೆ ಮಾಡಿದ ಘಟನೆ ಪಶ್ಚಿಮ ದೆಹಲಿಯ ರಘುಬಿರ್ ನಗರದಲ್ಲಿ ನಡೆದಿದೆ.
ಮೃತ ಯುವಕನನ್ನು ಖಾಸಗಿ ಕಾರು ಚಾಲಕನಾಗಿದ್ದ ಮನೀಶ್(25) ಎಂದು ಗುರುತಿಸಲಾಗಿದೆ. ಈತನನ್ನು ಹತ್ಯೆಗೈದ ಮೂವರು ಬಾಲಕರು 16-17 ವರ್ಷದವರಾಗಿದ್ದು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಮೂವರು ಅಪರಾಧಿಗಳು ಯುವಕನಿಗೆ ಥಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ಆಧಾರದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಈ ಮೂವರನ್ನು ಬಂಧಿಸಿ ಬಾಲಾಪರಾಧ ಹತ್ಯೆ ಕೇಸು ದಾಖಲಿಸಲಾಗಿದೆ. ಹಾಗೆಯೇ ಹತ್ಯೆಗೆ ಬಳಸಿದ ಸಾಧನಗಳನ್ನು ಕೂಡಾ ವಶಕ್ಕೆ ಪಡೆಯಲಾಗಿದೆ ಎಂದು ಕ್ಯಾಲ ಪೊಲೀಸ್ ಠಾಣೆಯ ಉಪ ಆಯುಕ್ತ ದೀಪಕ್ ಪುರೋಹಿತ್ ತಿಳಿಸಿದ್ದಾರೆ.