ಬೆಂಗಳೂರು, ಜು.14 (DaijiworldNews/MB) : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು ಅದರಲ್ಲೂ ಬೆಂಗಳೂರಿನಲ್ಲಿ ಹೆಚ್ಚಿನ ಪ್ರಕರಣ ದಾಖಲಾಗುತ್ತಿದೆ. ಈ ಹಿನ್ನಲೆ ನಾಳೆಯಿಂದ ಒಂದು ವಾರಗಳ ಕಾಲ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಲಾಕ್ಡೌನ್ ಮಾಡಲಾಗುತ್ತದೆ. ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯನ್ನು ಗುರುವಾರದಿಂದ ಒಂದು ವಾರಗಳ ಕಾಲ ಲಾಕ್ಡೌನ್ ಮಾಡಲಾಗುತ್ತದೆ. ಅಗತ್ಯ ಸೌಲಭ್ಯ ಹೊರತುಪಡಿಸಿ ಮತ್ತೆಲ್ಲಾವೂ ಕೂಡ ಬಂದ್ ಆಗಲಿದ್ದು ಪಾನಪ್ರಿಯರು ಒಂದು ವಾರಕ್ಕೆ ಆಗುವಷ್ಟು ಮದ್ಯವನ್ನು ಈಗಲೇ ಖರೀದಿ ಮಾಡಿ ಸಂಗ್ರಹ ಮಾಡುತ್ತಿದ್ದಾರೆ.
ಸೋಮವಾರ ಒಂದು ದಿನದಲ್ಲೇ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮದ್ಯ ವ್ಯಾಪಾರವಾಗಿದ್ದು ಕೆಎಸ್ಬಿಸಿಎಲ್ಗೆ ಬರೋಬ್ಬರಿ 230 ಕೋಟಿ ಆದಾಯವಾಗಿದೆ. 215 ಕೋಟಿ ಮೌಲ್ಯದ 4.89 ಲಕ್ಷ ಲೀಟರ್ ಐಎಲ್ಎಲ್ ಮದ್ಯ, 15 ಕೋಟಿ ಮೌಲ್ಯದ 0.83 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ.
ಬೆಂಗಳೂರಿನಲ್ಲಿ ಸೋಮವಾರದಿಂದಲ್ಲೇ ಮದ್ಯ ಖರೀದಿಗೆ ಪಾನಪ್ರಿಯರು ಸಾಲುಗಟ್ಟಿ ನಿಂತಿದ್ದಾರೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೂಡಾ ಗುರುವಾರದಿಂದ ಒಂದು ವಾರಗಳ ಕಾಲ ಲಾಕ್ಡೌನ್ ಆಗುವುದರಿಂದ ಭಾರೀ ಪ್ರಮಾಣದ ಇಂದು ಹಾಗೂ ನಾಳೆಯೂ ಕೂಡಾ ಭಾರೀ ಪ್ರಮಾಣದ ಮದ್ಯ ಮಾರಾಟವಾಗುವ ಸಾಧ್ಯತೆಯಿದೆ.
ಇನ್ನು ಲಾಕ್ಡೌನ್ ಕಾರಣದಿಂದ ಹೆಚ್ಚು ಮದ್ಯ ಖರೀದಿಯಾಗಬಹುದು ಎಂದು ತಿಳಿದಿದ್ದ ಮದ್ಯದಂಗಡಿ ಮಾಲೀಕರು ಕೆಎಸ್ಬಿಸಿಎಲ್ನಿಂದ ಭಾರಿ ಪ್ರಮಾಣದಲ್ಲಿ ಮದ್ಯವನ್ನು ಖರೀದಿ ಮಾಡಿದ್ದರು.