ಜೈಪುರ್, ಜು.14 (DaijiworldNews/MB) : ರಾಜಸ್ಥಾನದಲ್ಲಿ ಬಂಡಾಯವೆದ್ದ ಸಚಿನ್ ಪೈಲಟ್ ಅವರನ್ನು ರಾಜ್ಯದ ಉಪ ಮುಖ್ಯಮಂತ್ರಿ ಹುದ್ದೆ ಹಾಗೂ ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲಾಗಿದ ಬೆನ್ನಲ್ಲೇ ಈ ಟ್ವೀಟ್ ಮಾಡಿರುವ ಸತ್ಯವನ್ನು ಸೋಲಿಸಲಾಗದು ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಸತ್ಯಕ್ಕೆ ತೊಂದರೆಯನ್ನು ಉಂಟು ಮಾಡಬಹುದು ಆದರೆ ಸತ್ಯವನ್ನು ಸೋಲಿಸಲಾಗುವುದಿಲ್ಲ'' ಎಂದಿದ್ದಾರೆ.
ರಾಜಸ್ತಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉಳಿಸುವ ಯತ್ನದಲ್ಲಿರುವ ಇತ್ತ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಸರ್ಕಾರದ ವಿರುದ್ಧ ಬಂಡಾಯವೆದಿದ್ದಾರೆ. ಪಕ್ಷದ ಆದೇಶವ್ನನು ಧಿಕ್ಕರಿಸಿ ಶಾಸಕಾಂಗ ಸಭೆಯಲ್ಲಿ ಭಾಗಿಯಾಗದವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಹಲವರ ಒತ್ತಾಯವಾಗಿತ್ತು.
ಎರಡನೇ ಸಭೆಯಲ್ಲೂ ಭಾಗಿಯಾಗದೆ ಬಂಡಾಯವೆದ್ದಿರುವ ಕಾರಣದಿಂದ ಸಚಿನ್ ಪೈಲಟ್ ಅವರನ್ನು ಡಿಸಿಎಂ ಸ್ಥಾನದಿಂದ ವಜಾಗೊಳಿಸಲಾಗಿದೆ. ಕಾಂಗ್ರೆಸ್ ನಾಯಕರು ಸಚಿನ್ ಪೈಲಟ್ ಅವರ ಮನವೊಲಿಸಲು ಬಹಳ ಯತ್ನ ಮಾಡಿದ್ದರೂ ಕೂಡಾ ಸಚಿನ್ ನಿರಾಕರಿಸಿದ್ದರು.