ಕೊಚ್ಚಿ, ಜು 15 (Daijiworld News/MSP): ಸನ್ಯಾಸಿನಿ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಕೇರಳದ ಬಿಷಪ್ ಫ್ರಾಂಕೋ ಮುಳ್ಳಕಾಲ್ಗೆ ಕೊವೀಡ್ ಸೋಂಕು ತಗುಲಿದೆ.
ಜಾಮೀನು ಮೇಲಿದ್ದ ಬಿಷಪ್ , ಅದರ ನಿಯಮದ ಅನ್ವಯ ಕೋರ್ಟ್ಗೆ ಹಾಜರಾಗದಿದ್ದರಿಂದ ನೀಡಿದ್ದ ಜಾಮೀನನ್ನು ಸ್ಥಳೀಯ ನ್ಯಾಯಾಲಯ ರದ್ದುಪಡಿಸಿದ್ದು, . ಅವರನ್ನು ಕೂಡಲೇ ಅರೆಸ್ಟ್ ಮಾಡುವ ಸಂಬಂಧ ಕೊಟ್ಟಾಯಂ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿತ್ತು.
ಪಂಜಾಬ್ನ ಕೊರೊನಾ ವೈರಸ್ ಕಂಟೈನ್ಮೆಂಟ್ ಝೋನ್ನಲ್ಲಿ ಫ್ರಾಂಕೋ ಮುಳ್ಳಕಾಲ್ ಸಿಲುಕಿಕೊಂಡಿದ್ದಾರೆ. ಆದ್ದರಿಂದ ನ್ಯಾಯಾಲಯಕ್ಕೆ ಬರಲು ಆಗುತ್ತಿಲ್ಲ ಎಂದು ಮುಳ್ಳಕಾಲ್ ಪರ ವಕೀಲ ವಾದಿಸಿದ್ದರು. ಆದರೆ, ಫ್ರಾಂಕೋ ಜಲಂಧರ್ನಲ್ಲಿ ವಾಸಿಸುತ್ತಿರುವ ಪ್ರದೇಶ ಕಂಟೈನ್ಮೆಂಟ್ ಝೋನ್ಗೆ ಒಳಪಡಲ್ಲ ಎಂದು ಪ್ರತಿವಾದಿ ವಾದಿಸಿದ್ದರು. ಈ ಹಿನ್ನಲೆಯಲ್ಲಿ ಹಾಗೂ ಒಂದೇ ಒಂದು ಬಾರಿ ಕೋರ್ಟ್ ಗೆ ಹಾಜರಾಗದ ಹಿನ್ನಲೆಯಲ್ಲಿ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಇದರ ಬೆನ್ನಲ್ಲೇ ಬಿಷಪ್ ಫ್ರಾಂಕೋ ಮುಳ್ಳಕಾಲ್ಗೆ ಕರೊನಾ ವೈರಸ್ ತಗುಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫ್ರಾಂಕೊ ಮುಳಕ್ಕಲ್ ಅವರು ಕ್ರೈಸ್ತ ಸನ್ಯಾಸಿನಿಯ ಮೇಲೆ 2014 ರಿಂದ 2016ರವರೆಗೆ ನಿರಂತರವಾಗಿ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಲಾಗಿತ್ತು. ರಾಜಕೀಯ ಮತ್ತು ಹಣ ಬಲದಿಂದ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿರುವ ಅವರಿಗೆ ಶಿಕ್ಷೆ ನೀಡಿ, ತನಗೆ ನ್ಯಾಯ ಒದಗಿಸಲು ಮಧ್ಯ ಪ್ರವೇಶ ಮಾಡಬೇಕು ಎಂದು ಕ್ರೈಸ್ತ ಸನ್ಯಾಸಿನಿಯ ವ್ಯಾಟಿಕನ್ಗೂ ಮನವಿ ಸಲ್ಲಿಸಿದ್ದರು.