ಬೆಂಗಳೂರು, ಜು 16 (DaijiworldNews/PY): ಓರ್ವ ಸಚಿವ ನಮ್ಮನ್ನು ಕೊರೊನಾದಿಂದ ಭಗವಂತನೇ ಕಾಪಾಡಬೇಕು ಎಂದರೆ ಮತ್ತೋರ್ವ ಸಚಿವರು ದೇವರ ಕಥೆ ಹೇಳುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮಿಂದ ಜನರ ಆರೋಗ್ಯ ಕಾಪಾಡಲು ಆಗದೇ ಇದ್ದರೆ, ರಾಜೀನಾಮೆ ನೀಡಿ. ರಾಜ್ಯದಲ್ಲಿ ರಾಜ್ಯಪಾಲ ಆಳ್ವಿಕೆ ಬರಲಿ. ಒಬ್ಬರು ಕೊರೊನಾದಿಂದ ನಮ್ಮನು ದೇವರೇ ಕಾಪಾಡಬೇಕು ಎಂದು ಹೇಳಿದರೆ, ಮತ್ತೊಬ್ಬರು ಸಭೆ ತೆರಳಿದಾಗಲೆಲ್ಲಾ ದೇವರ ಕಥೆಯನ್ನು ಹೇಳುತ್ತಾರೆ ಎಂದರು.
ಶ್ರೀರಾಮಲು ಅವರ ಹೇಳಿಕೆ ರಾಜ್ಯವನ್ನು ತಲ್ಲಣಗೊಳಿಸಿದೆ. ಅಧಿಕಾರ ಬೇಕು ಎಂದು ಶ್ರಮವಹಿಸಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಈಗ ನಮ್ಮ ಕೈಯಿಂದ ಏನೂ ಮಾಡಲು ಆಗುತ್ತಿಲ್ಲ ಎನ್ನುತ್ತಿದ್ದಾರೆ. ಆ ಹೇಳಿಕೆಯನ್ನು ಶ್ರೀರಾಮುಲು ಅವರು ವೈಯುಕ್ತಿಕವಾಗಿ ಹೇಳಿಲ್ಲ. ಅವರು ಬಹಿರಂಗವಾಗಿ ಸರ್ಕಾರದ ಸ್ಥಿತಿಯನ್ನು ಹೇಳಿಕೊಂಡಿದ್ದಾರೆ ಎಂದು ತಿಳಿಸಿದರು.