ನವದೆಹಲಿ, ಜು 17 (DaijiworldNews/PY): ಕಾಂಗ್ರೆಸ್ ಈಗ ಶರಶಯ್ಯೆಯಲ್ಲಿದ್ದು, ತನ್ನ ಶಾಸಕರನ್ನು ಸೇರಿದಂತೆ ಮತಗಳನ್ನು ಬಿಜೆಪಿಗೆ ಮಾರಾಟ ಮಾಡುತ್ತಿದೆ. ಕಾಂಗ್ರೆಸ್ ಮೇಲೆ ಜನರು ಇಟ್ಟಿರುವ ನಂಬಿಕೆಗೆ ದ್ರೋಹ ಬಗೆದಿದೆ ಎಂದು ಗುರುವಾರ ಆಮ್ ಆದ್ಮಿ ಪಕ್ಷ ಹೇಳಿದೆ.
ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ದಂಗೆ ಎದ್ದ ರಾಜಸ್ಥಾನದ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿದ ಎಎಪಿ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಕೊಳಕು ರಾಜಕೀಯದಲ್ಲಿ ತೊಡಗಿಕೊಂಡಿವೆ ಎಂದಿದೆ.
ಎಎಪಿ ರಾಷ್ಟ್ರೀಯ ವಕ್ತಾರ ರಾಘವ್ ಚಡ್ಡಾ ಅವರು ಮಾತನಾಡಿದ್ದು, ಒಂದು ಪಕ್ಷವು ತನ್ನ ಮತಗಳನ್ನು ಮತ್ತು ಶಾಸಕರನ್ನು ಮಾರಾಟ ಮಾಡುತ್ತಿದ್ದರೆ, ಇನ್ನೊಂದು ಪಕ್ಷವು ಅವುಗಳನ್ನು ಖರೀದಿಸುತ್ತಿದೆ. ನಾವು ಅನೈತಿಕ ರಾಜಕಾರಣಕ್ಕೆ ಸಾಕ್ಷಿಯಾಗಿದ್ದೇವೆ. ಕಾಂಗ್ರೆಸ್ ಹಳೆಯದಾಗಿದೆ. ಇದು ವೆಂಟಿಲೇಟರ್ನಲ್ಲಿದ್ದು, ಅದು ಉಸಿರಾಟವನ್ನು ಎಣಿಸುತ್ತಿದೆ. ಪ್ಲಾಸ್ಮಾ ಚಿಕಿತ್ಸೆ, ಹೈಡ್ರಾಕ್ಸಿಕ್ಲೋರೋಕ್ವಿನ್, ಯಾವುದೇ ರೆಮ್ಡೆಸಿವಿರ್ ಅದನ್ನು ಉಳಿಸಲು ಸಾಧ್ಯವಿಲ್ಲ ಎಂದು ವ್ಯಂಗ್ಯ ಮಾಡಿದರು.
ಕಾಂಗ್ರೆಸ್ ಪರ ಗೋವಾ, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಜನರು ಭರವಸೆಯೊಂದಿಗೆ ಮತ ಚಲಾಯಿಸಿದ್ದಾರೆ ಆದರೆ ಮತ ಮತ್ತು ಶಾಸಕರನ್ನು ಕಾಂಗ್ರೆಸ್ ಮಾರಾಟ ಮಾಡುತ್ತಿದೆ. ಕಾಂಗ್ರೆಸ್ಗೆ ಭವಿಷ್ಯವಿಲ್ಲ ಎಂದು ಹೇಳಿದರು.
ಇಂತಹ ಪರಿಸ್ಥಿತಿಯು ಎಎಪಿಗೆ ಜವಾಬ್ದಾರಿಯನ್ನು ನೀಡುತ್ತದೆ. ಆದರೆ, ಕಾಂಗ್ರೆಸ್ ಅಪಕ್ಷ ಅದನ್ನು ಅರ್ಥ ಮಾಡಿಕೊಳ್ಳುತ್ತದೇಯೇ?. ನಾವು ಜವಾಬ್ದಾರಿ ತೆಗದುಕೊಳ್ಳಬಹುದೇ ಎನ್ನುವುದನ್ನು ಸಮಯ ತಿರ್ಮಾನಿಸುತ್ತದೆ. ಆದರೆ, ಒಂದಿ ವಿಷಯವೇನೆಂದರೆ, ದೊಡ್ಡ ಸಾಂಸ್ಥಕ ರಚನೆಯನ್ನು ಎಎಪಿ ಪಕ್ಷವು ಹೊಂದಿಲ್ಲದೇ ಇದ್ದರೂ, ಎಎಪಿಯನ್ನು ಜನರು ಪರ್ಯಾಯವಾಗಿ ಕಾಣುತ್ತಾರೆ. ಆದರೆ, ದುರಾದೃಷ್ಟವೆಂದರೆ, ಕಾಂಗ್ರೆಸ್ ವಿನಾಶದತ್ತ ಸಾಗುತ್ತಿದೆ. ಎಎಪಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳುವುದನ್ನು ಬಿಟ್ಟರೆ ಬೇರೆ ದಾರಿ ಇಲ್ಲ ಎಂದರು.