ನಾಗಪುರ, ಜು.17 (DaijiworldNews/MB) : ವಿವಾಹಿತ ಪ್ರಿಯಕರನೊಂದಿಗೆ ಕ್ವಾರಂಟೈನ್ ಆಗಲು ಮಹಿಳಾ ಕಾನ್ಸ್ಟೇಬಲ್ ಒಬ್ಬರು ಪ್ರಿಯಕರನನ್ನು ತನ್ನ ಪತಿಯೆಂದು ಹೇಳಿ ಜೊತೆಯಲ್ಲೇ ಕ್ವಾರಂಟೈನ್ ಆದ ಘಟನೆ ನಾಗಪುರದಲ್ಲಿ ನಡೆದಿದೆ.
ಮಹಿಳಾ ಕಾನ್ಸ್ಟೇಬಲ್ ಸಹೋದ್ಯೋಗಿಗೆ ಕೊರೊನಾ ಸೋಂಕು ಪಾಸಿಟಿವ್ ಆದ ಕಾರಣ ಮಹಿಳಾ ಕಾನ್ಸ್ಟೇಬಲ್ನ್ನು ಕ್ವಾರಂಟೈನ್ಗೆ ಒಳಗಾಗಲು ತಿಳಿಸಿದಾಗ ಆಕೆ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತನ್ನ ಪತಿಯನ್ನು ಕೂಡಾ ನನ್ನೊಂದಿಗೆ ಕ್ವಾರಂಟೈನ್ ಮಾಡಬೇಕು ಎಂದು ಸ್ಥಳೀಯ ಅಧಿಕಾರಿಗಳಿಗೆ ಹೇಳಿ ಪ್ರಿಯಕರನೊಂದಿಗೆ ಪೊಲೀಸ್ ತರಬೇತಿ ಕೇಂದ್ರದಲ್ಲಿ ಕ್ವಾರಂಟೈನ್ ಆಗಿದ್ದಾರೆ.
ಇನ್ನು ಮೂರು ನಾಲ್ಕು ದಿನಗಳಾದರೂ ಮನೆಗ ಬರದ ತನ್ನ ಪತಿ ಬೇರೊಬ್ಬ ಮಹಿಳೆಯೊಂದಿಗೆ ಕ್ವಾರಂಟೈನ್ನಲ್ಲಿ ಇದ್ದಾರೆ ಎಂದು ತಿಳಿದ ಪತ್ನಿಯು ಪೊಲೀಸ್ ತರಬೇತಿ ಕೇಂದ್ರಕ್ಕೆ ಬಂದಿದ್ದು ಭದ್ರತಾ ಸಿಬ್ಬಂದಿ ಒಳಗೆ ಪ್ರವೇಶಿಸಲು ಬಿಡಲಿಲ್ಲ. ಬಳಿಕ ಮಹಿಳೆ ತನ್ನ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು, ಮಹಿಳಾ ಕಾನ್ಸ್ಟೇಬಲ್ ಸುಳ್ಳು ಮಾಹಿತಿ ನೀಡಿ ಪ್ರಿಯಕರನೊಂದಿಗೆ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ವ್ಯಕ್ತಿಯ ಪತ್ನಿಗೆ ಈ ವಿಚಾರ ತಿಳಿದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸ್ ಆಯುಕ್ತ ಡಾ.ಭೂಷಣಕುಮಾರ್ ಉಪಾಧ್ಯಾಯ ಅವರನ್ನೂ ಭೇಟಿಯಾಗಿದ್ದಾರೆ. ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ. ಬಳಿಕ ವ್ಯಕ್ತಿಯನ್ನು ಬೇರೆ ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.